ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿ ತಾಲೂಕಿನ ಭಾಗವತಿ ಗ್ರಾಮದಲ್ಲಿ (Bhagawati village) ಒಂಟಿ ಸಲಗದ ರಸ್ತೆಯಲ್ಲಿ ಪ್ರತ್ಯಕ್ಷವಾಗಿದ್ದು, ಸವಾರರಿಗೆ ಆತಂಕ ತಂದೊಡ್ಡಿತು. ರಸ್ತೆ ಮಧ್ಯದಲ್ಲೇ ನಿಂತು ಸಂಚರಿಸುತ್ತಿದ್ದ ಆನೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ಸುಮಾರು ಅರ್ಧ ಗಂಟೆಗಳ ಕಾಲ ಆನೆ ರಸ್ತೆ ತಡೆದು ನಿಂತಿದ್ದು, ಯಾವುದೇ ವಾಹನಗಳನ್ನು ಮುಂದೆ ಸಾಗಲು ಬಿಡದೆ ಆತಂಕ ಸೃಷ್ಟಿಸಿತು. ಈ ವೇಳೆ ಕೆಲ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆ ಮಧ್ಯದಲ್ಲೇ ಬಿಟ್ಟು ಭಯಭೀತರಾಗಿ ಸ್ಥಳದಿಂದ ದೂರ ಓಡಿದ ದೃಶ್ಯಗಳು ಕಂಡುಬಂದವು. ಇದನ್ನೂ ಓದಿ: ಭಟ್ಕಳ | ಅರಣ್ಯಾಧಿಕಾರಿಗಳ ದಾಳಿ – ಫ್ರಿಡ್ಜ್‌ಲ್ಲಿ 21 ಕೆಜಿ ಜಿಂಕೆ ಮಾಂಸ ಪತ್ತೆ
ಘಟನೆಗೆ ಸಂಬಂಧಿಸಿದ ದೃಶ್ಯಗಳನ್ನು ಕೆಲ ವಾಹನ ಸವಾರರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ನಂತರ ಆನೆ ಕಾಡಿನ ಕಡೆಗೆ ತೆರಳಿದ ಬಳಿಕ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿತು. ಭಾಗವತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿರುವುದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಭಯಭೀತರಾಗಿದ್ದಾರೆ.
ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಆನೆಗಳ ಸಂಚಾರ ನಿಯಂತ್ರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸರಣಿ ಅಪಘಾತ – ವಿದೇಶಿ ಪ್ರಜೆಗಳು ಸೇರಿ 24 ಜನರಿಗೆ ಗಾಯ

