ಹಾಸನ: ಒಂಟಿ ಸಲಗವೊಂದು (Elephant) ರಸ್ತೆಗೆ ಅಡ್ಡಲಾಗಿ ಮರ ಬೀಳಿಸಿ ವಾಹನ ಸವಾರರು ಪರದಾಡುವಂತೆ ಮಾಡಿದ ಘಟನೆ ಸಕಲೇಶಪುರದ (Sakleshpura) ಹಳ್ಳಿಬೈಲು ಗ್ರಾಮದ ಬಳಿ ನಡೆದಿದೆ.
ಗುರುವಾರ ರಾತ್ರಿ, ಗ್ರಾಮದ ಬಳಿ ದೈತ್ಯಾಕಾರದ ಒಂಟಿಸಲಗ ಬೈನೆ ಮರವನ್ನು ನೆಲಕ್ಕುರುಳಿಸಿ ಆರಾಮಾಗಿ ತಿನ್ನುತ್ತಾ ನಿಂತಿತ್ತು. ಇದರಿಂದ ಕೆಲಕಾಲ ಹಲವಾರು ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದವು. ಕೆಲಕಾಲ ವಾಹನ ಸವಾರರು ಇದರಿಂದ ಪರದಾಡಿದ್ದಾರೆ. ಬಳಿಕ ವಿಡಿಯೋ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವಂತೆ ಚಾಲಕರು ಒತ್ತಾಯಿಸಿದ್ದರು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಆಸಿಡ್ ಕುಡಿಸಿ ಸೊಸೆಯನ್ನು ಕೊಂದ ಅತ್ತೆ!
ಸ್ಥಳಕ್ಕೆ ಇಟಿಎಫ್ ಸಿಬ್ಬಂದಿ ಬಂದು ಪಟಾಕಿ ಸಿಡಿಸಿ ಸಲಗವನ್ನು ಕಾಡಿಗೆ ಓಡಿಸಿದ್ದಾರೆ. ಬಳಿಕ ಸುರಿಯುತ್ತಿರುವ ಮಳೆಯಲ್ಲಿಯೇ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಗಣೇಶ ವಿಸರ್ಜನೆಗೆ ಬೆಂಗ್ಳೂರಿನ ಕೆಲವು ಏರಿಯಾಗಳಲ್ಲಿ ಮದ್ಯ ನಿಷೇಧ