ಕೊಡಗು | ತೆಂಗಿನ ಮರ ಉರುಳಿಸಿ ಕಾರು ಜಖಂಗೊಳಿಸಿದ ಪುಂಡಾನೆ!

Public TV
1 Min Read

ಮಡಿಕೇರಿ: ವಿರಾಜಪೇಟೆಯ ಮಾಲ್ದಾರೆ ಹಾಗೂ ಮಠ ಗ್ರಾಮದಲ್ಲಿ ಕಾರು (Car) ಹಾಗೂ ಬೈಕ್ (Bike) ಮೇಲೆ ಕಾಡಾನೆ (Elephant) ದಾಳಿ ಮಾಡಿ ಸಂಪೂರ್ಣ ಜಖಂಗೊಳಿಸಿದೆ.

ಮಠ ಗ್ರಾಮದ ನಿವಾಸಿ ಹೇಮಂತ್ ಅವರ ಮನೆಯ ಸಮೀಪ ನಿಲ್ಲಿಸಿದ್ದ ಕಾರಿನ ಮೇಲೆ ಅಲ್ಲೇ ಇದ್ದ ತೆಂಗಿನ ಮರವನ್ನು ಆನೆ ತಳ್ಳಿ ಹಾಕಿದೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಹಿಂದೆ ಕೊಡ ಇವರ ಬೈಕ್‌ನ್ನು ಆನೆ ಜಖಂಗೊಳಿಸಿತ್ತು. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಸಾವಿನ ಸಂಖ್ಯೆ 265ಕ್ಕೆ ಏರಿಕೆ

ಮಾಲ್ದಾರೆ ಗ್ರಾಮದ ಮುತ್ತಪ್ಪ ಹಾಗೂ ಗಣಪತಿ ದೇವಸ್ಥಾನ ಪಕ್ಕ ನಿಲ್ಲಿಸಿದ್ದ ಆಸ್ತಾನ ಹಾಡಿಯ ರಮೇಶ್‌ ಅವರ ಬೈಕ್ ಮೇಲೆ ಆನೆ ದಾಳಿ ಮಾಡಿದೆ. ಇದರಿಂದ ಬೈಕ್‌ ಜಖಂಗೊಂಡಿದೆ. ಇನ್ನೂ, ಕಾರ್ಮಿಕರ ಮೇಲೂ ಕಾಡಾನೆ ದಾಳಿಗೆ ಯತ್ನಿಸಿದೆ. ಈ ವೇಳೆ ಕಾರ್ಮಿಕರು ಓಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜೂ.16ರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಬಂದ್

Share This Article