ಸೊಂಡಿಲಿನಿಂದ ಟಿಟಿ ಪಲ್ಟಿ, 2 ಕಾರು ಜಖಂ – ಮದವೇರಿದ ಆನೆಯಿಂದ ದಾಂಧಲೆ

Public TV
1 Min Read

ತಿರುವನಂತಪುರಂ: ದೇವಸ್ಥಾನದ ಉತ್ಸವಕ್ಕೆ (Temple Fair) ಕರೆ ತಂದಿದ್ದ ಆನೆಯೊಂದು (Elephant) ಮದವೇರಿ 2 ಕಾರು, ಒಂದು ಟೆಂಪೋ ಟ್ರಾವೆಲ್ಲರ್‌ ಅನ್ನು ಜಖಂಗೊಳಿಸಿದ ಘಟನೆ ತ್ರಿಶ್ಯೂರ್‌ (Thrissur) ಜಿಲ್ಲೆಯಲ್ಲಿ ನಡೆದಿದೆ.

ತೃಪ್ರಯಾರ್‌ನಲ್ಲಿರುವ ಶ್ರೀರಾಮ ಕ್ಷೇತ್ರದ ಉತ್ಸವಕ್ಕೆ ಪ್ರತಿ ವರ್ಷ ಆನೆಯನ್ನು ಕರೆ ತರಲಾಗುತ್ತಿದೆ. ಈ ರೀತಿಯಾಗಿ ಕರೆ ತಂದಾಗ ಜನರು ಆನೆಯ  ಫೋಟೋ, ವಿಡಿಯೋ ತೆಗೆದಿದ್ದಾರೆ.
ಇದನ್ನೂ ಓದಿ: Vijay Diwas: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಿಸಿದ ವೀರಯೋಧರಿಗೆ ಮೋದಿ ನಮನ

ಈ ಸಂದರ್ಭದಲ್ಲಿ ಆನೆಗೆ ಮದವೇರಿ 2 ಕಾರು, ಒಂದು ಟಿಟಿಯನ್ನು ಸಂಪೂರ್ಣ ಜಖಂಗೊಳಿಸಿದೆ. ಸೊಂಡಿಲು ಬಳಸಿ ಟಿಟಿಯನ್ನು ಪಲ್ಟಿ ಮಾಡಿ ಆಕ್ರೋಶ ಹೊರ ಹಾಕಿದೆ. ಈ ವೇಳೆ ಅಲ್ಲಿದ್ದ ಜನ ಆನೆಯ ಮೇಲೆ ಕಲ್ಲು ಎಸೆದಿದ್ದಾರೆ.

ವಿಚಾರ ತಿಳಿದು ತ್ರಿಶ್ಯೂರ್‌ನಿಂದ ಎಲಿಫೆಂಟ್ ಸ್ಕ್ವಾಡ್ ಸದಸ್ಯರು ಆಗಮಿಸಿ ಹಗ್ಗ ಬಳಸಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಂದೂವರೆ ಗಂಟೆಯ ಬಳಿಕ ಆನೆ ಶಾಂತವಾಗಿದೆ.

 

Share This Article