ತೋಟಕ್ಕೆ ಹೊರಟಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ – ಮಹಿಳೆ ಗಂಭೀರ

Public TV
1 Min Read

ರಾಮನಗರ: ಕಾಡಾನೆಯೊಂದು (Elephant) ಏಕಾಏಕಿ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಕನಕಪುರದ (Kanakapura) ಬರಡನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ದುಂಡಮ್ಮ (35) ಗಾಯಗೊಂಡ ಮಹಿಳೆಯಾಗಿದ್ದಾಳೆ. ಮುಂಜಾನೆ ತೋಟಕ್ಕೆ ಹೋಗುತ್ತಿದ್ದ ವೇಳೆ ಆನೆ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆನೆ ದಾಳಿಯಿಂದ ಮಹಿಳೆಯ ಎಡಗೈ ಮುರಿದಿದೆ. ಕೂಡಲೇ ಗ್ರಾಮಸ್ಥರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಅಪಘಾತ – ಕೊಡಗಿನ ಯುವಕ ಬಲಿ

ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು (Forest Department) ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಗಾಯಗೊಂಡ ಮಹಿಳೆಯ ಚಿಕಿತ್ಸಾ ವೆಚ್ಚ ಭರಿಸಿ, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಗ್ರಾಮದಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಸ್ವಸ್ಥಗೊಂಡಿದ್ದ ಕೈದಿ ಸಾವು- ಮರ್ಮಾಂಗಕ್ಕೆ ಖಾರದ ಪುಡಿ ಹಾಕಿದ್ರಾ ಪೊಲೀಸ್ರು?

Share This Article