ಮೈಸೂರು | ಮಾಲ್‌ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು

Public TV
1 Min Read

-ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಸಾವು

ಮೈಸೂರು: ಮಾಲ್‌ನ ನಾಲ್ಕನೇ ಅಂತಸ್ತಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನ (Mysuru) ಡಿಆರ್‌ಸಿ ಮಾಲ್‌ನಲ್ಲಿ (DRC Mall) ನಡೆದಿದೆ.

ಸುನೀಲ್ (27) ಮೃತ ದುರ್ದೈವಿ. ಮಾಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಹಾಗೂ ಗಾಯಗೊಂಡವರನ್ನು ಚಂದ್ರು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಜಾರಕಿಹೊಳಿ Vs ಕತ್ತಿ| ಡಿಸಿಸಿ ಫೈಟ್‌ ತಾರಕಕ್ಕೆ – ನಿರ್ದೇಶಕನಿಗೆ ನಡು ರಸ್ತೆಯಲ್ಲೇ ಪತ್ನಿಯಿಂದ ಕಪಾಳ ಮೋಕ್ಷ

ಸೋಮವಾರ (ಸೆ.8) ಡಿಆರ್‌ಸಿ ಮಾಲ್‌ನ ನಾಲ್ಕನೇ ಮಹಡಿಯಲ್ಲಿದ್ದ ಬೋರ್ಡ್‌ವೊಂದನ್ನು ಸುನೀಲ್ ತೆರವು ಮಾಡುತ್ತಿದ್ದರು. ಈ ವೇಳೆ ಗಮನಕ್ಕೆ ಬಾರದೇ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಕುಸಿದರು. ತಕ್ಷಣ ಕೈಗೆ ಸಿಕ್ಕಿದ್ದ ರಾಡ್‌ವೊಂದನ್ನು ಹಿಡಿದುಕೊಂಡು ನೇತಾಡುತ್ತಿದ್ದರು. ಇದನ್ನು ಗಮನಿಸಿದ ಚಂದ್ರು ಸಹಾಯಕ್ಕೆ ಮುಂದಾಗಿದ್ದು, ಇವರೂ ಕೂಡ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ವೇಳೆ ರಾಡ್ ಹಿಡಿದುಕೊಂಡಿದ್ದ ಸುನೀಲ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಸದ್ಯ ಚಂದ್ರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ – ಸಂಜೆ ಫಲಿತಾಂಶ ಪ್ರಕಟ

 

Share This Article