ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಇಲ್ಲದ್ದಕ್ಕೆ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ದಂಡ

Public TV
1 Min Read

ತಿರುವನಂತಪುರಂ: ಕೇರಳ ಸಂಚಾರಿ ಪೊಲೀಸರು(Kerala Traffic Police) ಎಲೆಕ್ಟ್ರಿಕ್‌ ಸ್ಕೂಟರ್‌ ಮಾಲೀಕರಿಗೆ ಮಾನ್ಯವಾದ ಮಾಲಿನ್ಯ ನಿಯಂತ್ರಣ (Pollution Under Control) ಪ್ರಮಾಣ ಪತ್ರವನ್ನು ಹೊಂದಿಲ್ಲದ ಕಾರಣಕ್ಕೆ ದಂಡ ಹಾಕಿ ಸುದ್ದಿಯಾಗಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಚೇರಿಯಲ್ಲಿ ಸೆಪ್ಟೆಂಬರ್ 6ರಂದು ಏಥರ್ 450X (Ather 450X) ಸ್ಕೂಟರ್‌ ಮಾಲೀಕರಿಗೆ 250 ರೂ. ದಂಡ ವಿಧಿಸಿದ್ದಾರೆ. ಪೊಲೀಸರು ನೀಡಿದ ಚಲನ್‌ ಪ್ರತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 213 (5) (ಇ) ಅಡಿ ದಂಡ ವಿಧಿಸಲಾಗಿದೆ. ನೆಟ್ಟಿಗರು ಈಗ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ(Nitin Gadkari) ಅವರಿಗೆ ಟ್ಯಾಗ್‌ ಮಾಡಿ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬೇಕೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಳ ಉಡುಪು ಖರೀದಿಸಲು ದೆಹಲಿಗೆ ಹೋಗಿದ್ದೆ- ಜಾರ್ಖಂಡ್ ಸಿಎಂ ಸಹೋದರನ ವಿವಾದಾತ್ಮಕ ಹೇಳಿಕೆ

ಪೊಲೀಸರು ಇಂತಹ ವಿಚಿತ್ರ ಚಲನ್ ನೀಡುತ್ತಿರುವುದು ಇದೇ ಮೊದಲಲ್ಲ. ಜುಲೈನಲ್ಲಿ ಕೇರಳದ ವ್ಯಕ್ತಿಯೊಬ್ಬರು ಸಾಕಷ್ಟು ಇಂಧನವಿಲ್ಲದೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಚಲಾಯಿಸಿದ್ದಕ್ಕಾಗಿ ದಂಡವನ್ನು ಹಾಕಿದ್ದರು.

ಏಥರ್ ಸ್ಕೂಟರ್ 5.4 kW ಬ್ರಶ್‌ಲೆಸ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, 2.4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ. ಸ್ಕೂಟರ್ 3.9 ಸೆಕೆಂಡುಗಳಲ್ಲಿ ಝೀರೋದಿಂದ 40 ಕಿಮೀ/ಗಂಟೆಗೆ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 80 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿರುವ ಸ್ಕೂಟರ್‌ ಒಂದು ಬಾರಿ ಚಾರ್ಜ್‌ ಮಾಡಿದರೆ 75 ಕಿ.ಮೀವರೆಗೆ ಸಂಚರಿಸಬಹುದಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *