ಶೀಘ್ರವೇ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ರಹೀಂ ಖಾನ್

2 Min Read

ಬೆಂಗಳೂರು/ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ (LocalBody Election) ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ (Raheem Khan) ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆ ಕೇಳಿದರು. ರಾಜ್ಯದ ಹಲವಾರು ನಗರ ಸ್ಥಳೀಯ ಸಂಸ್ಥೆಗಳ (ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ) ಅವಧಿ ಮುಗಿದರೂ ಚುನಾವಣೆಗಳು ನಡೆದಿಲ್ಲ. ಕೂಡಲೇ ಚುನಾವಣೆ ನಡೆಸಬೇಕು. ಪ್ರಜಾಪ್ರಭುತ್ವದ ಆಶಯಕ್ಕೆ ನಾವು ನ್ಯಾಯ ಕೊಡ್ತಾ ಇಲ್ಲ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಆಗಿ 5 ವರ್ಷ ಆಯ್ತು. ಜಿಬಿಎ ಚುನಾವಣೆ ಆಗಿ ವರ್ಷಗಳೇ ಕಳೆಯಿತು. ಚುನಾವಣಾ ಆಯೋಗ ಕೋರ್ಟ್ಗೆ ಹೋಗಿ ಚುನಾವಣೆ ಮಾಡಿಸಿ ಅನ್ನೋ ಹಂತಕ್ಕೆ ಬಂದಿದೆ ವ್ಯವಸ್ಥೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮಯಕ್ಕೆ ತಕ್ಕಂತೆ ನಡೆಸಬೇಕು. ಜನರ ಸಮಸ್ಯೆ, ರೈತರ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ. ಮಾಧ್ಯಮಗಳಲ್ಲಿ, ಪೇಪರ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಮೊದಲು ಚುನಾವಣೆ ನಡೆಸಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಏರ್ಪೋರ್ಟ್ ವಿಚಾರಕ್ಕೆ 3 ಸಚಿವರ ನಡುವೆ ಸದನದಲ್ಲಿ ವಾಗ್ವಾದ

ಇದಕ್ಕೆ ಸಚಿವ ರಹೀಂಖಾನ್ ಉತ್ತರ ನೀಡಿ, ರಾಜ್ಯದಲ್ಲಿ 187 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯವಾಗಿದೆ. ಅವಧಿ ಮುಗಿದು 1 ತಿಂಗಳು ಮಾತ್ರ ಆಗಿದೆ. ಈಗಾಗಲೇ ಫೈಲ್ ರೆಡಿ ಮಾಡಲಾಗಿದೆ. ಮೀಸಲಾತಿ ಮತ್ತು ಡಿಲಿಮಿಟೇಷನ್ ಕೆಲಸ ನಡೆಯುತ್ತಿದೆ. ಹೀಗಾಗಿ ನಮಗೆ ಸಮಯ ಬೇಕು. ಕೆಲವು ಸ್ಥಳೀಯ ಸಂಸ್ಥೆಗಳು ಅಪ್‌ಗ್ರೇಡ್ ಆಗಿದೆ. ಹೀಗಾಗಿ ತಡವಾಗುತ್ತಿದೆ ಎಂದರು. ಇದನ್ನೂ ಓದಿ: ಮಸೀದಿಗಳಲ್ಲಿ ಕೂಗುವ ಆಜಾನ್‌ನಿಂದ ಶಬ್ದಮಾಲಿನ್ಯ: ಪರಿಷತ್‌ನಲ್ಲಿ ಆಡಳಿತ-ವಿಪಕ್ಷಗಳ ನಡುವೆ ಗದ್ದಲ ಗಲಾಟೆ

ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸೋ ಇಚ್ಚೆ ನಮ್ಮ ಸರ್ಕಾರಕ್ಕೆ ಇದೆ. ಆದಷ್ಟು ಬೇಗ ಚುನಾವಣೆ ಮಾಡುತ್ತೇವೆ. ಹಿಂದೆ ಬಿಜೆಪಿ ಅವಧಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ಆಗಿರಲಿಲ್ಲ. ಅದನ್ನ ಮಾಡಿದ್ದು ನಮ್ಮ ಸರ್ಕಾರ ಎಂದ ರಹೀಂಖಾನ್ ಬಿಜೆಪಿ ವಿರುದ್ಧ ಮಾತನಾಡಿದರು. ಇದನ್ನೂ ಓದಿ: ಮೊಟ್ಟೆಯಿಂದ ಕ್ಯಾನ್ಸರ್‌ ಆತಂಕ ಸುದ್ದಿ- ಮೊಟ್ಟೆಗಳ ಪರಿಶೀಲನೆಗೆ ಕ್ರಮ: ದಿನೇಶ್ ಗುಂಡೂರಾವ್

ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ಮಾಡಿ, ಚುನಾವಣೆ ಮಾಡದೇ ಆರೋಪ ಮಾಡಬೇಡಿ ಅಂತ ಆಕ್ರೋಶ ಹೊರಹಾಕಿದರು. ಈ ವೇಳೆ ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶ ಮಾಡಿದ ಸಚಿವ ಬೈರತಿ ಸುರೇಶ್, ಬಿಜೆಪಿ ಇದ್ದಾಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ ಚುನಾವಣೆ ಮಾಡಿಲ್ಲ. 7 ವರ್ಷ ಚುನಾವಣೆ ಮಾಡಿಲ್ಲ ಇವರು. ನಾವು ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕುಣಿಗಲ್ ತಾಲ್ಲೂಕು – ಮುಂದಿನ ವರ್ಷದಲ್ಲಿ ತಾರತಮ್ಯ ನಿವಾರಣೆ: ಸಿದ್ದರಾಮಯ್ಯ

ಬೈರತಿ ಸುರೇಶ್ ಮಾತಿಗೆ ಸಿಟಿ ರವಿ ಸೇರಿ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕಿದರು. ನೀವು ಬಂದು 2.5 ವರ್ಷ ಆದ್ರು ಯಾಕೆ ಚುನಾವಣೆ ಮಾಡಲಿಲ್ಲ.ನಾಟಿ ಕೋಳಿ ತಿನ್ಮೋದು ಆಯ್ತು ಅಂತ ಕಿಡಿಕಾರಿದರು. ಈ ವೇಳೆ ಬೈರತಿ ಸುರೇಶ್ ವರ್ಸಸ್ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೀತು. ಅಂತಿಮವಾಗಿ ಸಚಿವ ರಹೀಂಖಾನ್ ಉತ್ತರ ನೀಡಿ, ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು 100% ಸಿದ್ಧತೆ ಆಗಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ರಕ್ರಿಯೆ ಮುಗಿಸಿ ಚುನಾವಣೆ ನಡೆಸುತ್ತೇವೆ ಎಂದರು. ಇದನ್ನೂ ಓದಿ: ಪಿಎಂ ಫಸಲ್ ಭಿಮಾ ಯೋಜನೆಯಡಿ ಚಿತ್ರದುರ್ಗ ರೈತರಿಗೆ 559.91 ಕೋಟಿ ರೂ. ವಿಮೆ ಹಣ: ರಾಮನಾಥ್ ಠಾಕೂರ್

Share This Article