ಕಾಂಗ್ರೆಸ್‌ ಚುನಾವಣಾ ಚಾಣಕ್ಯ ಸುನೀಲ್‌ ಕನುಗೋಳು ಈಗ ಸಿಎಂಗೆ ಮುಖ್ಯ ಸಲಹೆಗಾರ

Public TV
0 Min Read

ಬೆಂಗಳೂರು: ಕಾಂಗ್ರೆಸ್‌ನ ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಸುನೀಲ್‌ ಕನುಗೋಳು (Sunil Kanugolu) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮುಖ್ಯ ಸಲಹೆಗಾರರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ತಮ್ಮ ಸಲಹೆಗಾರರಾಗಿಸಿ ಸಿಎಂ ನೇಮಕ ಮಾಡಿದ್ದಾರೆ.‌ ಇದನ್ನೂ ಓದಿ: ಕರ್ತವ್ಯ ಸಮಯದಲ್ಲಿ ಲಂಚ ಪಡೆದ ಮಹಿಳಾಧಿಕಾರಿ – ಕಡ್ಡಾಯ ನಿವೃತ್ತಿಗೊಳಿಸಿ ಆದೇಶ

ಚುನಾವಣೆ ಸಂದರ್ಭದ ಪೇಸಿಎಂ, ಸೇಸಿಎಂ ಅಭಿಯಾನ, ಉಚಿತ ಗ್ಯಾರಂಟಿಗಳ ಹಿಂದಿನ ಸೂತ್ರಧಾರಿಯೇ ಸುನೀಲ್ ಕನುಗೋಳು ಎನ್ನಲಾಗಿದೆ. ಪಕ್ಷ ಗೆಲ್ಲುವಲ್ಲಿ ತೆರೆ ಹಿಂದಿನ ತಂತ್ರಗಾರಿಕೆಯನ್ನು ಹೆಣೆದಿದ್ದರು. ಈಗ ಆಡಳಿತದಲ್ಲೂ ಸಿಎಂಗೆ ಮುಖ್ಯ ಸಲಹೆಗಾರರಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ.

Share This Article