ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಮಧ್ಯ ಪ್ರವೇಶದಿಂದ ರಾಜ್ಯ ಅಪೆಕ್ಸ್ ಬ್ಯಾಂಕ್ (Apex Bank) ಅಧ್ಯಕ್ಷರ ಆಯ್ಕೆ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ (CM Siddaramaiah) ಬುಧವಾರ ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಸಭೆ ನಡೆಸಿ ಸಂಧಾನ ಸೂತ್ರ ಸಿದ್ಡಪಡಿಸಿ ಚುನಾವಣೆ ಮುಂದಕ್ಕೆ ಹಾಕುವ ಭರವಸೆ ನೀಡಿದ್ದರು. ಆದರೂ ಇಂದು ಬೆಳಗ್ಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿಯ ಬೆಳ್ಳಿ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು.
ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬೈಯ್ಯಾಪುರ ಸಹ ನಾಮಪತ್ರ ಸಲ್ಲಿಸಿದ್ದರು. ಎದುರಾಳಿ ಬಣವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ನಿರ್ದೇಶಕರು ನಾಮಪತ್ರ ಸಲ್ಲಿಸಬಹುದು ಎಂಬ ಲೆಕ್ಕಾಚಾರವೂ ಜೋರಾಗಿತ್ತು. ಅಷ್ಟರಲ್ಲಿ ನಿರ್ದೇಶಕರಿಗೆ ಕರೆ ಮಾಡಿದ ಸಿಎಂ ಸಿದ್ದರಾಮಯ್ಯ ಎಲ್ಲರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂತರ ಬೆಳ್ಳಿ ಪ್ರಕಾಶ್ ಹಾಗೂ ಬೈಯ್ಯಾಪುರ ಇಬ್ಬರು ತಮ್ಮ ಉಮೇದುವಾರಿಕೆ ವಾಪಸ್ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಧಿಕಾರಿ ಮೇಲೆ ಸಿಎಂ ಶಿಸ್ತು ಕ್ರಮದ ಎಚ್ಚರಿಕೆ – ರಾಜೀನಾಮೆಗೆ ಮುಂದಾಗಿದ್ದ ಜಾರ್ಜ್?
ಸ್ವಪಕ್ಷದ ಕಾಣದ ಕೈವಾಡ ಬಗ್ಗೆ ರಾಜೇಂದ್ರ ರಾಜಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. ಸುರ್ಜೇವಾಲಗೆ ಸಹಕಾರ ಸಂಘದ ಮಾಹಿತಿ ಕೊರತೆ ಇದ್ದು, ಅವರಿಗೆ ಮನದಟ್ಟು ಮಾಡುವುದಾಗಿ ತಿಳಿಸಿದ್ದಾರೆ.

