7 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಿ ಇಲ್ಲವೇ ದೇಶದ ಕ್ಷಮೆ ಕೇಳಿ: ರಾಹುಲ್‌ಗೆ ಚುನಾವಣಾ ಆಯೋಗ ಡೆಡ್‌ಲೈನ್‌

Public TV
2 Min Read

ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು 7 ದಿನಗಳ ಒಳಗಡೆ ಸಾಕ್ಷ್ಯಾಧಾರಗಳೊಂದಿಗೆ ಅಫಿಡವಿಟ್ ಸಲ್ಲಿಸಬೇಕು ಅಥವಾ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ.

ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಈ ವಿಚಾರದಲ್ಲಿ ಮೂರನೇ ಆಯ್ಕೆ ಇಲ್ಲ. ನಿಗದಿತ ಸಮಯದೊಳಗೆ ಅಫಿಡವಿಟ್ ಸಲ್ಲಿಸದೇ ಇದ್ದರೆ ಆ ಆರೋಪಗಳನ್ನು ಆಧಾರರಹಿತವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.  ಇದನ್ನೂ ಓದಿ: ಬಿಹಾರದಲ್ಲಿ ಮತದಾರರ ಹಕ್ಕುಗಳ ಯಾತ್ರೆಗೆ ಚಾಲನೆ ಬಿಜೆಪಿ, ಚು. ಆಯೋಗ ವಿರುದ್ಧ ರಾಗಾ ವಾಗ್ದಾಳಿ

ರಾಹುಲ್ ಗಾಂಧಿಯವರ ಡಬಲ್ ವೋಟಿಂಗ್ ಮತ್ತು ಮತ ಕಳ್ಳತನ ಆರೋಪಗಳನ್ನು ತಿರಸ್ಕರಿಸಿದ ಅವರು, ಬಿಹಾರದ ಏಳು ಕೋಟಿಗೂ ಹೆಚ್ಚು ಮತದಾರರು ಚುನಾವಣಾ ಆಯೋಗದ ಜೊತೆ ನಿಂತಿರುವಾಗ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಅಥವಾ ಮತದಾರರ ವಿಶ್ವಾಸಾರ್ಹತೆಯ ಬಗ್ಗೆ ಯಾವುದೇ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.  ಇದನ್ನೂ ಓದಿ: ರಿಸಲ್ಟ್‌ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ

ಮಷಿನ್ ರೀಡೆಬೆಲ್ ಡೇಟಾ ನೀಡುವುದರಿಂದ ಮತದಾರರ ಗೌಪ್ಯತೆ ಬಹಿರಂಗವಾಗಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನಲೆ ಅದನ್ನು ನೀಡಲು ಸಾಧ್ಯವಿಲ್ಲ. ವಿಶೇಷ ಪರಿಷ್ಕರಣೆ ಬಿಹಾರದಲ್ಲಿ ಮೊದಲ ಬಾರಿಗೆ ನಡೆಯುತ್ತಿಲ್ಲ. ಈ ಹಿಂದೆ 2003 ರಲ್ಲೇ ಪರಿಷ್ಕರಣೆ ಮಾಡಲಾಗಿತ್ತು. ಈಗ ಈ ಪರಿಷ್ಕರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಸುಮ್ಮನೇ ಆರೋಪ ಮಾಡಲಾಗುತ್ತಿದೆ ಎಂದರು.

Share This Article