– ಸುಪ್ರೀಂ ಆದೇಶದ ಅನ್ವಯ ಮತದಾರರ ಪಟ್ಟಿಯಯನ್ನು ಬಹಿರಂಗಪಡಿಸುವಂತಿಲ್ಲ
– ಸುಳ್ಳು ಆರೋಪಗಳಿಗೆ ನಾವು ಹೆದರಲ್ಲ
ನವದೆಹಲಿ: ಫಲಿತಾಂಶ ಪ್ರಕಟವಾದ ಬಳಿಕ ಬಳಿಕ ಹೈಕೋರ್ಟ್‌ನಲ್ಲಿ ದೂರು ದಾಖಲಿಸದೇ ಈಗ ಮತಗಳವಿನಂತಹ ಗಂಭೀರ ಆರೋಪದ ಮೂಲಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ (Election Commission) ತಿರುಗೇಟು ನೀಡಿದೆ.
ರಾಹುಲ್ ಗಾಂಧಿ ಅವರ ಮತಗಳವು ಆರೋಪಕ್ಕೆ ಇಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರು ಸುದ್ದಿಗೋಷ್ಠಿ ನಡೆಸಿ ಆಯೋಗದ ವಿರುದ್ಧ ಬಂದ ಎಲ್ಲಾ ಆರೋಪಗಳಿಗೆ ಉತ್ತರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಯೋಗ ಹೇಳಿದ್ದೇನು?
ಕೆಲವರು ಮತಗಳವು ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಕೇಳಿದರೆ ಉತ್ತರ ಸಿಗಲಿಲ್ಲ. ಇಂತಹ ಸುಳ್ಳು ಆರೋಪಕ್ಕೆ ಆಯೋಗ ಮತ್ತು ಮತದಾರರು ಹೆದರುವುದಿಲ್ಲ. ಆಯೋಗದ ಹೆಗಲ ಮೇಲೆ ಬಂದೂಕು ಇಟ್ಟು ಮತದಾರರನ್ನು ಗುರಿಯಾಗಿಸಿ ರಾಜಕೀಯ ಮಾಡಲಾಗುತ್ತಿದೆ. ಈ ಆರೋಪಗಳಿಗೆ ಆಯೋಗ ಹೆದರದೇ ಬಡವರು, ಮಹಿಳೆಯರು, ಯುವಜನತೆ ಎಲ್ಲಾ ಮತದಾರರ ಜೊತೆಗೆ ಯಾವುದೇ ಭೇದ ಭಾವ ಇಲ್ಲದೇ ನಿಲ್ಲುತ್ತದೆ.
#WATCH | Delhi: Chief Election Commissioner Gyanesh Kumar says, “…After 1st of August, when our daily bulletins started coming, no political party has lodged a single objection till now. So, this can only mean two things. Either the draft list is completely correct…The… pic.twitter.com/Lke1l5eNTq
— ANI (@ANI) August 17, 2025
ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಾಗ ಸಿದ್ಧವಾಗಿರುವ ಪ್ರಕ್ರಿಯೆ ಅನುಸರಿಸಲಾಗುತ್ತದೆ. ಕೆಲವೊಮ್ಮೆ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸಲು ಅವಕಾಶವಿದೆ. ಇದಕ್ಕೆ ಮತದಾರರ, ರಾಜಕೀಯ ಪಕ್ಷಗಳು, ಬೂತ್ ಲೆವೆಲ್ ಆಫೀಸರ್ (ಬಿಎಲ್‌ಓ) ಪಾಲುದಾರಿಕೆ ಬಹಳ ಮುಖ್ಯ. ಇದರಲ್ಲಿ ರಾಜ್ಯ ಸರ್ಕಾರದ ಅಧಿಕಾರಿಯೂ ಇರುತ್ತಾರೆ. ಅವರ ಮೂಲಕ ಎಲ್ಲ ಪ್ರಕ್ರಿಯೆ ನಡೆಯುತ್ತದೆ.
ಡ್ರಾಫ್ಟ್ ಮತ್ತು ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಜೊತೆಗೆ ಹಂಚಿಕೊಳ್ಳಲಾಗುತ್ತದೆ. ಇದರ ಮೇಲೂ ಸಮಸ್ಯೆ ಬಂದರೆ ಜಿಲ್ಲಾಧಿಕಾರಿಗೆ ಮನವಿ ಮಾಡಬಹುದು. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೂ ಮತದಾರರ ಪಟ್ಟಿ ನೀಡಲಾಗುತ್ತದೆ. ಬೂತ್ ಏಜೆಂಟ್ ಬಳಿಯೂ ಇದರ ಮಾಹಿತಿ ಇರುತ್ತದೆ. ಫಲಿತಾಂಶದ ಬಳಿಕವೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಫಲಿತಾಂಶ ಪ್ರಶ್ನಿಸಬಹುದು. 45 ದಿನಗಳ ಬಳಿಕ ಯಾವುದೇ ದೂರು ದಾಖಲಿಸದೇ ಆರೋಪ ಮಾಡುವುದು ಕಾನೂನು ಬಾಹಿರ. 45 ದಿನಗಳಲ್ಲಿ ಬಾರದ ಅನುಮಾನ ಈಗ ಬರುವುದು ಅದರ ಉದ್ದೇಶ ಏನು ಜನರಿಗೆ ಗೊತ್ತಿದೆ.
ಮತದಾರರ ಪರಿಷ್ಕರಣೆ ಪ್ರತಿಬಾರಿ ನಡೆದರೆ ವಿಶೇಷ ಪರಿಷ್ಕರಣೆ ಬಹಳ ಕಡಿಮೆ ಆಗುತ್ತದೆ. ಕಳೆದ ಇಪ್ಪತ್ತು ವರ್ಷದಿಂದ ಬಿಹಾರದಲ್ಲಿ ವಿಶೇಷ ಪರಿಷ್ಕರಣೆ ನಡೆಯದ ಕಾರಣ ಮಾಡುವಂತೆ ಬಹಳ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಇಡೀ ಮತದಾರರ ಪರಿಷ್ಕರಣೆ ಹೊಸದಾಗಿ ಮಾಡಲಾಗುತ್ತದೆ. ಕೆಲವು ಮತದಾರರು ಎರಡು ಕಡೆಗೆ ಮತದಾನದ ಹಕ್ಕು ಹೊಂದಿರುತ್ತಾರೆ. ಕೆಲವರು ಹೆಸರು ಬದಲಿಸಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಮತದಾರರ ಪಟ್ಟಿ ಪರಿಶುದ್ಧ ಮಾಡಲು ವಿಶೇಷ ಪರಿಷ್ಕರಣೆ ಮಾಡಬೇಕು.
ಆರೋಪ ಮಾಡುವ ವ್ಯಕ್ತಿ ಆ ಕ್ಷೇತ್ರದ ಮತದಾರರ ಆಗದಿದ್ದರೆ ಆರೋಪ ಮಾಡಿದಾಗ, ಈ ಬಗ್ಗೆ ಒಂದು ಪ್ರಮಾಣ ಪತ್ರ ಸಲ್ಲಿಸಬೇಕು. ಚುನಾವಣಾ ಅಧಿಕಾರಿಗಳ ಮುಂದೆ ಪ್ರಮಾಣಿಸಬೇಕು. ಇದು ಚುನಾವಣಾ ಆಯೋಗದ ನಿಯಮಗಳಲ್ಲಿ ಉಲ್ಲೇಖ ಇದೆ. ಇದು ಹೊಸ ಕಾನೂನು ಅಲ್ಲ, ಬಹಳಷ್ಟು ಹಳೆಯ ಕಾನೂನು ಆಗಿದ್ದು
ಮಷಿನ್ ರೀಡೆಬೆಲ್ ಡೇಟಾ ನೀಡುವುದರಿಂದ ಮತದಾರರ ಗೌಪ್ಯತೆ ಬಹಿರಂಗವಾಗಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನಲೆ ಅದನ್ನು ನೀಡಲು ಸಾಧ್ಯವಿಲ್ಲ. ವಿಶೇಷ ಪರಿಷ್ಕರಣೆ ಬಿಹಾರದಲ್ಲಿ (Bihar) ಮೊದಲ ಬಾರಿಗೆ ನಡೆಯುತ್ತಿಲ್ಲ. ಈ ಹಿಂದೆ 2003 ರಲ್ಲೇ ಪರಿಷ್ಕರಣೆ ಮಾಡಲಾಗಿತ್ತು. ಈಗ ಈ ಪರಿಷ್ಕರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಸುಮ್ಮನೇ ಆರೋಪ ಮಾಡಲಾಗುತ್ತಿದೆ.
ಕೆಲವರು ಭ್ರಮೆ ಹರಡುವ ಪ್ರಯತ್ನ ಮಾಡುತ್ತಿದ್ದಾರೆ. ಹೆಜ್ಜೆಗೆ ಹೆಜ್ಜೆ ಹಾಕಿ ಎಲ್ಲರೂ ಜೊತೆಯಾಗಿ ಪ್ರಕ್ರಿಯೆ ನಡೆಸುತ್ತಿರುವುದು ಸತ್ಯ. ಬಿಹಾರದ ಏಳು ಕೋಟಿಗೂ ಅಧಿಕ ಮತದಾರರು ಆಯೋಗದ ಜೊತೆಗೆ ನಿಂತಿದ್ದಾರೆ. ಇಂತಹ ಸಮಯದಲ್ಲಿ ಆಯೋಗದ ವಿರುದ್ಧ ಪ್ರಶ್ನೆ ಎತ್ತುವ ಪ್ರಶ್ನೆ ಬರುವುದಿಲ್ಲ.
ಫಲಿತಾಂಶದ ಬಳಿಕ ಹೈಕೋರ್ಟ್‌ನಲ್ಲಿ ದೂರು ದಾಖಲಿಸದೇ ಮತಗಳ್ಳತನದಂತಹ ಗಂಭೀರ ಆರೋಪ ಮಾಡುವ ಮೂಲಕ ಜನರ ದಾರಿಯನ್ನು ತಪ್ಪಿಸಲಾಗುತ್ತಿದೆ. ಇದು ಸಂವಿಧಾನಕ್ಕೆ ಮಾಡುವ ಅಪಮಾನ. 2019 ರಲ್ಲಿ ಮತದಾರರ ಮಾಹಿತಿ ಗೌಪ್ಯವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮತದಾರರ ಅನುಮತಿ ಇಲ್ಲದೇ ಅವರ ಮಾಹಿತಿಯನ್ನು ಮಾಧ್ಯಮದ ಮುಂದೆ ಇಡಲಾಯಿತು. ಮತದಾರರ ಪಟ್ಟಿಯಲ್ಲಿ ಯಾರ ಹೆಸರು ಇರುತ್ತದೆ ಅವರು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು. ಲೋಕಸಭೆಯಲ್ಲಿ ಒಂದು ಕೋಟಿಗೂ ಸಿಬ್ಬಂದಿ, ಹತ್ತು ಲಕ್ಷಕ್ಕೂ ಬಿಎಲ್‌ಓಗಳು, 20 ಲಕ್ಷಕ್ಕೂ ಅಧಿಕ ಬೂತ್ ಏಜೆಂಟ್‌ಗಳು ಕೆಲಸ ಮಾಡಿದ್ದಾರೆ. ಇಷ್ಟು ಪಾರದರ್ಶಕ ವ್ಯವಸ್ಥೆಯಲ್ಲಿ ಮತಗಳವು ಸಾಧ್ಯವೇ?