ಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌: ಸಿದ್ದರಾಮಯ್ಯ

Public TV
2 Min Read

– ಇಡೀ ದೇಶಕ್ಕೆ ರಾಹುಲ್ ನಾಯಕತ್ವ ಬೇಕು

ಬೆಂಗಳೂರು: ಚುನಾವಣಾ ಆಯೋಗ (Election Commission) ಬಿಜೆಪಿಯ ಬ್ರ‍್ಯಾಂಚ್ ಆಫೀಸ್. ಬಿಜೆಪಿಯ ಮಾತನ್ನು ಕೇಳುವವರೇ ಆಯೋಗದಲ್ಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಗಂಭೀರ ಆರೋಪ ಮಾಡಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ರಾಹುಲ್ ಗಾಂಧಿ (Rahul Gandhi) ಈ ವಿಚಾರ ಇಟ್ಟುಕೊಂಡು ಹೋರಾಟ ಮಾಡ್ತಾರೆ. ಬಿಜೆಪಿ ಸದಾ ಅಧಿಕಾರ ಬಯಸುವ ಪಕ್ಷ. ತನಿಖಾ ಸಂಸ್ಥೆಗಳ ಒಬಿಸಿ, ದಲಿತರನ್ನು ಹೆದರಿಸಿ ಬೆದರಿಸಿ ಅಧಿಕಾರ ಪಡೆಯುತ್ತಿದೆ ಎಂದು ದೂರಿದರು.

ಸಂವಿಧಾನ ಉಳಿಯಲು ಇವರು ಮುಂದುವರೆಯಬಾರದು. ಸಂವಿಧಾನದ ರಕ್ಷಣೆಯಲ್ಲಿ ನಮ್ಮೆಲ್ಲರ ರಕ್ಷಣೆ ಇದೆ. ಅಸಮಾನತೆಯನ್ನು ತಡೆದು ಹಾಕುವರೆಗೂ ದೇಶದಲ್ಲಿ ಶಾಂತಿ, ನ್ಯಾಯ, ನೆಮ್ಮದಿ ನೆಲೆಸಲ್ಲ. ಸಾಮಾಜಿಕ ನ್ಯಾಯದಲ್ಲಿ, ಭಾತೃತ್ವದಲ್ಲಿ, ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇರುವರು ಅಧಿಕಾರಕ್ಕೆ ಬಂದರೆ ಮಾತ್ರ ಸಮಾನತೆ ಇರುತ್ತದೆ. ಕಾಂಗ್ರೆಸ್, ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಮಾತ್ರ ಸಮಾನತೆ ಸಿಗಲು ಸಾಧ್ಯ. ಇಡೀ ದೇಶ ರಾಹುಲ್ ಗಾಂಧಿ ನಾಯಕತ್ವ ಬೇಕು ಎಂದು ಬಯಸುತ್ತಿದೆ ಎಂದು ಸಿಎಂ ಹೇಳಿದರು.  ಇದನ್ನೂ ಓದಿ: ಮೋದಿ ಮತಗಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ: ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿ ಜನರ ಆಶೀರ್ವಾದ ಪಡೆದು ಯಾವತ್ತೂ ಅಧಿಕಾರಕ್ಕೆ ಬಂದಿಲ್ಲ. ಮತ ಕದ್ದು, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು. ಇವಿಎಂ ದುರುಪಯೋಗ, ಮತ ಕಳವು, ಆಪರೇಷನ್ ಕಮಲ ಮೂಲಕ ಬಿಜೆಪಿ ರಾಜ್ಯದಲ್ಲೂ, ದೇಶದಲ್ಲೂ ಅಧಿಕಾರಕ್ಕೆ ಬಂದಿದೆ. ಕಳೆದ ಲೋಕಸಭೆಯಲ್ಲಿ ಮೋದಿಯವರ ಬಿಜೆಪಿ ಬಹುಮತ ಪಡೆದಿರಲಿಲ್ಲ, ಅನೇಕ ಕಡೆ ಅಕ್ರಮ ಮಾಡಿದ್ದಾರೆ. ಹೀಗಾಗಿ ಮೋದಿಯವರು ಕೂಡಲೇ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸಿ ಜನರ ಆಶೀರ್ವಾದ ಪಡೆದು ಗೆದ್ದು ಬರಲಿ ಎಂದು ಸವಾಲು ಹಾಕಿದರು.  ಇದನ್ನೂ ಓದಿ: ಅಸಂಬದ್ಧ ವಿಶ್ಲೇಷಣೆ.. ದೇಶದ ಜನತೆ ಕ್ಷಮೆಯಾಚಿಸಿ: ರಾಗಾ ‘ಮತಗಳ್ಳತನ’ ಆರೋಪಕ್ಕೆ ಚುನಾವಣಾ ಆಯೋಗ ಆಕ್ರೋಶ

ಮನುವಾದಿಗಳು ಈ ಮತ ಹಕ್ಕನ್ನೇ ಕಸಿಯುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ರಾಹುಲ್ ಅವರು ಅಧ್ಯಯನ ಮಾಡಿ ಮಹಾದೇವಪುರದಲ್ಲಿ ಮತ ಕಳವು ಬಹಿರಂಗಪಡಿಸಿದ್ದಾರೆ. ಎಲ್ಲಾ ಕಡೆ ಮುಂದೆ ಇದ್ದ ನಾವು ಮಹಾದೇವಪುರದಲ್ಲಿ 1 ಲಕ್ಷ ಮತಗಳಿಂದ ಸೋತೆವು. ಈ ರೀತಿ ಇಡೀ ದೇಶದಲ್ಲಿ ಅಕ್ರಮ ನಡೆದಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ 2008, 2019 ರಲ್ಲಿ ಯಾವಾಗಲೂ ಅಧಿಕಾರಕ್ಕೆ ಬಹುಮತ ಪಡೆದು ಬರಲಿಲ್ಲ, ಆಪರೇಷನ್ ಮಾಡಿಯೇ ಅಧಿಕಾರಕ್ಕೆ ಬಂದರು. 2019 ರಲ್ಲಿ ನಮ್ಮ ಸರ್ಕಾರವನ್ನು ಕೆಡವಿದರು. ಬಿಜೆಪಿಯವರು ರಾಜ್ಯದಲ್ಲಿ ಯಾವತ್ತೂ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು ಎಂದು ದೂರಿದರು.

 

Share This Article