ವೋಟರ್‌ ಐಡಿ ದುರುಪಯೋಗ ತಡೆಗೆ ಪರಿಹಾರ; ಇ-ಸೈನ್ ವ್ಯವಸ್ಥೆ ಆರಂಭಿಸಿದ ಚುನಾವಣಾ ಆಯೋಗ

Public TV
2 Min Read

ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸಲು ಸಂಬಂಧಿಸಿದ ವಿವಾದ ಪರಿಹರಿಸಲು ಚುನಾವಣಾ ಆಯೋಗ (ECI) ಹೊಸ ತಾಂತ್ರಿಕ ವ್ಯವಸ್ಥೆಯೊಂದನ್ನ ಪರಿಚಯಿಸಿದೆ.

ಇತ್ತೀಚೆಗಷ್ಟೇ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಆರೋಪ ಮಾಡಿದ್ದರು. ಈ ವೇಳೆ ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರು ಅಳಿಸಲು ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸಲ್ಲಿಸಿರುವ ಬಗ್ಗೆ ಆರೋಪ ಎತ್ತಿದ್ದರು. ಇದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆಯನ್ನೂ ನೀಡಿತ್ತು. ಈ ಬೆನ್ನಲ್ಲೇ ವೋಟರ್‌ ಐಡಿ ದುರುಪಯೋಗ ತಡೆಯಲು ECINET ಪೋರ್ಟಲ್ ಮತ್ತು ಅಪ್ಲಿಕೇಶನ್‌ನಲ್ಲಿ ‘ಇ-ಸೈನ್’ (E-Sign) ಎಂಬ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.

ʻಇ-ಸೈನ್‌ʼ ವ್ಯವಸ್ಥೆ ಅಡಿಯಲ್ಲಿ, ಮತದಾರರು ನೋಂದಣಿ ಅಥವಾ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸುವಾಗ ತಮ್ಮ ಆಧಾರ್‌ ಲಿಂಕ್‌ ಮಾಡಲಾದ ಮೊಬೈಲ್‌ ಸಂಖ್ಯೆಯನ್ನ ಬಳಸಿಕೊಂಡು ಪರಿಶೀಲಿಸಬೇಕಾಗುತ್ತದೆ. ಈ ಹಿಂದೆ ಅರ್ಜಿದಾರರು ಯಾವುದೇ ಪರಿಶೀಲನೆಯಿಲ್ಲದೇ ಫಾರ್ಮ್‌ಗಳನ್ನು ಸಲ್ಲಿಸಬಹುದಿತ್ತು, ಇದು ವೋಟರ್‌ ಐಡಿ ದುರುಯೋಗವಾಗುವ ಸಾಧ್ಯತೆಯಿತ್ತು. ಹಾಗಾಗಿ ಆಯೋಗ ಈ ವ್ಯವಸ್ಥೆ ಪ್ರಾರಂಭಿಸಿದೆ ಎಂದು ಆಯೋಗ ಹೇಳಿದೆ. ಇದನ್ನೂ ಓದಿ: ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಇ-ಸೈನ್‌ ಹೇಗೆ ಕೆಲಸ ಮಾಡುತ್ತೆ?
ಹೊಸ ವ್ಯವಸ್ಥೆಯಲ್ಲಿ ಯಾವುದೇ ಒಬ್ಬ ವ್ಯಕ್ತಿ ECINET ಪೋರ್ಟಲ್‌ ಅಥವಾ ಅಪ್ಲಿಕೇಶನ್‌ನಲ್ಲಿ ಫಾರ್ಮ್‌-6 (ಹೊಸ ನೋಂದಣಿಗಾಗಿ), ಫಾರ್ಮ್-7 (ಹೆಸರು ಅಳಿಸುವಿಕೆಗಾಗಿ) ಅಥವಾ ಫಾರ್ಮ್-8 (ಹೆಸರು ಅಥವಾ ವಿಳಾಸ ತಿದ್ದುಪಡಿಗಾಗಿ) ಅನ್ನು ಭರ್ತಿ ಮಾಡಿದಾಗ ಇ-ಸೈನ್ ಮಾಡಬೇಕಾಗುತ್ತದೆ. ಅಂದ್ರೆ ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ನಲ್ಲಿರುವ ಹೆಸರು ಹೊಂದಿಕೆ ಆಗಿದೆಯೇ? ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್‌ ಆಗಿಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ನಂತರ ಅರ್ಜಿದಾರರನ್ನು ಬಾಹ್ಯ ಇ-ಸೈನ್ ಪೋರ್ಟಲ್‌ಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ತಮ್ಮ ಆಧಾರ್‌ ಸಂಖ್ಯೆ ನಮೂದಿಸಬೇಕಾಗುತ್ತದೆ. ಇದನ್ನೂ ಓದಿ: ಆಳಂದ ಫೈಲ್ಸ್‌ | ಆನ್‌ಲೈನ್‌ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ – ಇಂಚಿಚು ವಿವರ ನೀಡಿದ ಚುನಾವಣಾ ಆಯೋಗ 

OTP ಕಡ್ಡಾಯ
ಇಸೈನ್‌ ಪ್ರವೇಶಿಸಿ ಆಧಾರ್ ಸಂಖ್ಯೆ ನಮೂದಿಸಿದ ನಂತ್ರ, ಆಧಾರ್‌ಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿ ಒಪ್ಪಿಗೆ ನೀಡಿದ ನಂತರವೇ ಪರಿಶೀಲನೆ ಪೂರ್ಣಗೊಳ್ಳುತ್ತದೆ. ನಂತರ ಅರ್ಜಿದಾರರನ್ನು ಫಾರ್ಮ್ ಸಲ್ಲಿಸಲು ECINET ಪೋರ್ಟಲ್‌ಗೆ ಹಿಂತಿರುಗಿಸಲಾಗುತ್ತದೆ. ಈ ಪ್ರಕ್ರಿಯೆಯು ನಕಲಿ ಅರ್ಜಿಗಳನ್ನು ತಡೆಯಲು ಅನುಕೂಲವಾಗುತ್ತದೆ.

ಬದಲಾವಣೆ ಏಕೆ?
ಕಾಂಗ್ರೆಸ್‌ ಹಿರಿಯ ನಾಯಕ ರಾಹುಲ್‌ ಗಾಂಧಿ ಇದೇ ಸೆಪ್ಟೆಂಬರ್‌ 8ರಂದು ಆಳಂದ ಕ್ಷೇತ್ರದಲ್ಲಿ ಆನ್‌ಲೈನ್‌ ಅರ್ಜಿಗಳ ಮೂಲಕ 6,000 ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ರಾಹುಲ್‌ ಆರೋಪಿಸಿದಂತೆ ಆನ್‌ಲೈನಿನಲ್ಲಿ ಮತ ಅಳಿಸಲು ಸಾಧ್ಯವಿಲ್ಲ: ಚುನಾವಣಾ ಆಯೋಗ

Share This Article