ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ

By
1 Min Read

ನವದೆಹಲಿ: ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಮೊದಲ ಹಂತದಲ್ಲೇ ಎಂದರೆ ನವೆಂಬರ್ 7 ರಂದೇ ಎಲ್ಲಾ 40 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 80.66% ರಷ್ಟು ಮತದಾನವಾಗಿತ್ತು. ಇಲ್ಲಿ ಸದ್ಯ ಬಿಜೆಪಿ ಬೆಂಬಲಿತ ಮಿಜೋ ನ್ಯಾಷನಲ್ ಫ್ರಂಟ್ (MNF) ಸರ್ಕಾರವಿದೆ. ಈ ಬಾರಿಯ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಎಂಎನ್‌ಎಫ್, ಅಧಿಕಾರ ಕೈಗೆಟುಕಿಸಿಕೊಳ್ಳಲು ಕಾಂಗ್ರೆಸ್ ಮತ್ತು ಹೊಸ ಪಕ್ಷವಾದ ಜೋರಂ ಪೀಪಲ್ಸ್ ಮೂವ್‌ಮೆಂಟ್ (ZPM) ಪ್ರತ್ಯೇಕವಾಗಿ ಕಸರತ್ತು ಮಾಡಿವೆ.

ಮಣಿಪುರ ಹಿಂಸಾಚಾರ ಇಲ್ಲಿನ ಚುನಾವಣೆಯಲ್ಲಿ ಪರಿಣಾಮ ಬೀರಿದಂತೆ ಕಾಣಿಸಿಕೊಂಡಿದೆ. ಮತ್ತೆ ಪ್ರಾದೇಶಿಕ ಪಕ್ಷಗಳೇ ಇಲ್ಲಿ ಮೇಲುಗೈ ಸಾಧಿಸಿದಂತೆ ಕಂಡು ಬಂದಿದೆ. ಯಾವುದೇ ಪಕ್ಷಕ್ಕೆ ಬಹುಮತ ಬರೋದು ಅನುಮಾನವಾಗಿದ್ದರೂ ಹೊಸ ಪಕ್ಷವಾದ ಝಡ್‌ಪಿಎಂ ಜೊತೆ ಅಧಿಕಾರದಲ್ಲಿರೋ ಎಂಎನ್‌ಎಫ್‌ಗೆ ಟಫ್ ಸ್ಪರ್ಧೆಯಿದೆ.

ಯಾವ ಸಮೀಕ್ಷೆ ಏನು ಹೇಳಿದೆ?
ಒಟ್ಟು 40 ಕ್ಷೇತ್ರಗಳಲ್ಲಿ ಸರಳ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ.
ಜನ್‌ಕಿ ಬಾತ್: ಎಂಎನ್‌ಎಫ್ 10-14, ಕಾಂಗ್ರೆಸ್ 05-09, ಬಿಜೆಪಿ 00-02, ಝಡ್‌ಪಿಎಂ 15-25
ಸಿ-ವೋಟರ್: ಎಂಎನ್‌ಎಫ್ 15-21, ಕಾಂಗ್ರೆಸ್ 02-08, ಬಿಜೆಪಿ 0-5, ಝಡ್‌ಪಿಎಂ 12-18
ಇಂಡಿಯಾ ಟಿವಿ: ಎಂಎನ್‌ಎಫ್ 14-18, ಕಾಂಗ್ರೆಸ್ 08-10, ಬಿಜೆಪಿ 0-2, ಝಡ್‌ಪಿಎಂ 12-16
ಪೀಪಲ್ಸ್ ಪಲ್ಸ್: ಎಂಎನ್‌ಎಫ್ 16-20, ಕಾಂಗ್ರೆಸ್ 08-10, ಬಿಜೆಪಿ 0-2, ಝಡ್‌ಪಿಎಂ 12-17
ಆಕ್ಸಿಸ್ ಮೈ ಇಂಡಿಯಾ: ಎಂಎನ್‌ಎಫ್ 3-7, ಕಾಂಗ್ರೆಸ್ 0-4, ಬಿಜೆಪಿ 0-2, ಝಡ್‌ಪಿಎಂ 28-35 ಇದನ್ನೂ ಓದಿ: ರಾಜಸ್ಥಾನದಲ್ಲಿ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ

ಮಿಜೋರಾಂನಲ್ಲಿ 2018ರ ಚುನಾವಣೆಯಲ್ಲಿ ಎಂಎನ್‌ಎಫ್ 26 ಸ್ಥಾನಗಳು(37.6% ಮತ), ಕಾಂಗ್ರೆಸ್ 5 ಸ್ಥಾನಗಳು (29.98% ಮತ) ಹಾಗೂ ಬಿಜೆಪಿ 1 ಸ್ಥಾನವನ್ನು (8.1% ಮತ) ಗೆದ್ದಿತ್ತು. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ

Share This Article