ವೃದ್ಧೆಯ ಹತ್ಯೆಗೈದು ದರೋಡೆ – ಸಾಲ ತೀರಿಸೋಕೆ ಚಿನ್ನಾಭರಣ ಎಗರಿಸಿ ಪಕ್ಕದ ಮನೆಯವನಿಂದ್ಲೇ ಕೊಲೆ

1 Min Read

ನೆಲಮಂಗಲ: ಕತ್ತು ಹಿಸುಕಿ ವೃದ್ಧೆಯನ್ನು ಹತ್ಯೆ ಮಾಡಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶೋಭಾ (69) ಮೃತ ವೃದ್ಧೆ. ಬಂಧಿತ ಆರೋಪಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ. ವದ್ಧ ದಂಪತಿ ಇಬ್ಬರೇ ಮನೆಯಲ್ಲಿದ್ದಾಗ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕತ್ತು ಹಿಸುಕಿ ವೃದ್ಧೆಯ ಹತ್ಯೆ – ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್

ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ಘಟನೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಟೌನ್ ಪೊಲೀಸರು ಸಿಸಿಟಿವಿಯ ದೃಶ್ಯ ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಮೈತುಂಬ ಸಾಲವಿದ್ದು, ಸಾಲ ತೀರಿಸೋಕೆ ಚಿನ್ನಾಭರಣ ದೋಚುವ ಸ್ಕೆಚ್ ಹಾಕಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಕೊಲೆಯಾದ ಆರು ಗಂಟೆಯಲ್ಲಿ ಪ್ರಕರಣ ಬೇಧಿಸಿದ ನೆಲಮಂಗಲ ಟೌನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನೆಲಮಂಗಲ ಟೌನ್ ಸಿಪಿಐ ಭರತ್ ಗೌಡ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.ಇದನ್ನೂ ಓದಿ: ಪತ್ನಿ ಕೊಂದು ಮನೆಯಲ್ಲೇ ಹೂತಿದ್ದ ಕೇಸ್ – ಕೊಲೆ ಬಳಿಕ ನಾಪತ್ತೆಯಾಗಿರುವ ನಾಟಕವಾಡಿ ದೂರು ನೀಡಿದ್ದ ಹಂತಕ

Share This Article