ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ಎಸೆತ- ಪೊಲೀಸರಿಂದ ಬಿಗಿಭದ್ರತೆ

Public TV
1 Min Read

ಬೆಂಗಳೂರು: ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ (L R Shivarame Gowda) ಮನೆ ಮೇಲೆ ಮೊಟ್ಟೆ ದಾಳಿಗೆ ಯತ್ನ ನಡೆದಿದೆ.

ಪೆನ್ ಡ್ರೈವ್ ವಿಚಾರ ಮಾತನಾಡುವಾಗ ಮಾಜಿ ಸಂಸದರು ಜೆಡಿಎಸ್ ವರಿಷ್ಠರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಮೊಟ್ಟೆ ದಾಳಿಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.

ತಡರಾತ್ರಿ ಕಾರಿನಲ್ಲಿ ಬಂದ ಐದಾರು ಮಂದಿಯಿಂದ ಈ ಯತ್ನ ನಡೆದಿದೆ. ಪೊಲೀಸರು ಕಂಡು ಮನೆ ಮುಂದೆ ಮೊಟ್ಟೆ ಎಸೆದು ಪರಾರಿಯಾಗಿದ್ದಾರೆ. ಈ ನಡುವೆ ಪೊಲೀಸರ ಕಣ್ತಪ್ಪಿಸಿ ಅದಾಗಲೇ ಐದಾರು ಮೊಟ್ಟೆ ಎಸೆದಿದ್ದಾರೆ. ಇದನ್ನೂ ಓದಿ: ಮುಂಗಾರು ಪೂರ್ವದಲ್ಲೇ ಕಾವೇರಿಗೆ ಜೀವಕಳೆ; KRS ಒಳಹರಿವು ಹೆಚ್ಚಳ

ಸದ್ಯ ಮೊಟ್ಟೆ ಎಸೆಯಲು ಯತ್ನಿಸಿ ಪರಾರಿಯಾದವರಿಗಾಗಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಮೊಟ್ಟೆ ಎಸೆಯಲು ಯತ್ನಿಸಿದವರಿಗೆ ಬಲೆ ಬೀಸಲಾಗಿದೆ.

ಮೊಟ್ಟೆ ಎಸೆದು ಹೋದ ಬಳಿಕ ಪೊಲೀಸರು ಎಲ್ ಆರ್ ಎಸ್ ಮನೆ ರಸ್ತೆ ಎರಡೂ ಕಡೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಕೈಗೊಂಡಿದ್ದಾರೆ.

Share This Article