ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ

Public TV
3 Min Read

ತ್ತೀಚಿನ ದಿನಗಳಲ್ಲಿ ಜನ್ಮದಿನ, ಮದುವೆ ಹೀಗೆ ವಿಶೇಷ ಕಾರ್ಯಕ್ರಮದಲ್ಲಿ ಖುಷಿಯನ್ನು ವ್ಯಕ್ತಪಡಿಸಲು ಕೇಕ್ ಕತ್ತರಿಸುವುದು ಒಂದು ಟ್ರೆಂಡ್ ಆಗಿದೆ. ಕೇಕ್ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಇಷ್ಟವಾಗುತ್ತದೆ. ಅದರಲ್ಲೂ ಹನಿ ಕೇಕ್ ತುಂಬಾ ರುಚಿಯಾಗಿರುತ್ತದೆ. ಇದನ್ನು ಬೇಕರಿಯಿಂದ ತರುವ ಬದಲು ಸುಲಭವಾಗಿ ಮನೆಯಲ್ಲೇ ಮಾಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಮೊಟ್ಟೆ ಬಳಸದೆ ಹನಿ ಕೇಕ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಎಗ್‍ಲೆಸ್ ಹನಿಕೇಕ್ (Eggless Honey Cake) ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಥಾಯ್ ಸ್ಪೆಷಲ್ – ಟೀ ಐಸ್ ಕ್ರೀಮ್ ಮಾಡೋದು ಹೀಗೆ

ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು – 1 ಕಪ್
ಮೊಸರು -ಕಾಲು ಕಪ್
ಎಣ್ಣೆ – ಕಾಲು ಕಪ್
ಸಕ್ಕರೆ ಪುಡಿ – ಅರ್ಧ ಕಪ್
ಒಣಕೊಬ್ಬರಿ ತುರಿ – ಅರ್ಧ ಕಪ್
ಸಕ್ಕರೆ – ಅರ್ಧ ಕಪ್
ಹಾಲು – ಅರ್ಧ ಕಪ್
ಬೇಕಿಂಗ್ ಸೋಡಾ – ಕಾಲು ಚಮಚ
ಬೇಕಿಂಗ್ ಪೌಡರ್ – ಅರ್ಧ ಚಮಚ
ಫ್ರೂಟ್ ಜಾಮ್ – ಕಾಲು ಕಪ್
ಪೈನಾಪಲ್ ಎಸೆನ್ಸ್ – 1 ಚಮಚ
ಜೇನುತುಪ್ಪ- 1 ಚಮಚ

ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‍ನಲ್ಲಿ ಕಾಲು ಕಪ್ ಮೊಸರನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ಹಾಲನ್ನು ಹಾಕಿಕೊಳ್ಳಿ. ಬಳಿಕ ಇದಕ್ಕೆ ಕಾಲು ಕಪ್ ಎಣ್ಣೆಯನ್ನು ಹಾಕಿಕೊಳ್ಳಿ.
* ಈಗ ಇದಕ್ಕೆ ಒಂದು ಚಮಚ ಪೈನಾಪಲ್ ಎಸೆನ್ಸ್ ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ಮಿಶ್ರಣ ಚನ್ನಾಗಿ ಹೊಂದಿಕೊಂಡ ಬಳಿಕ ಇದನ್ನು ಪಕ್ಕಕ್ಕೆ ಇಡಿ.
* ಬಳಿಕ ಇನ್ನೊಂದು ಬೌಲ್‍ನಲ್ಲಿ ಒಂದು ಕಪ್ ಮೈದಾ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ಸಕ್ಕರೆ ಪೌಡರ್ ಅನ್ನು ಹಾಕಿಕೊಳ್ಳಿ. ಈಗ ಇದಕ್ಕೆ ಒಂದು ಚಮಚ ಬೇಕಿಂಗ್ ಪೌಡರ್, ಅರ್ಧ ಚಮಚ ಬೇಕಿಂಗ್ ಸೋಡಾ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
* ನಂತರ ಇದಕ್ಕೆ ಮೊಸರು ಮತ್ತು ಹಾಲಿನ ಮಿಶ್ರಣವನ್ನು ಸೇರಿಸಿಕೊಂಡು ಗಂಟಾಗದಂತೆ ತಿರುವಿಕೊಳ್ಳಿ. ಮಿಶ್ರಣ ತುಂಬಾ ತೆಳ್ಳಗಾಗಬಾರದು.
* ಈಗ ಒಂದು ಟ್ರೇಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ಅದಕ್ಕೆ ಒಂದು ಚಮಚ ಮೈದಾ ಹಿಟ್ಟನ್ನು ಹರಡಿಕೊಂಡು ಬಳಿಕ ಕೇಕ್ ಮಿಶ್ರಣವನ್ನು ಅದಕ್ಕೆ ಹಾಕಿಕೊಳ್ಳಿ.
* ಈಗ ಓವನ್ ಅನ್ನು 180 ಡಿಗ್ರಿ ಬಿಸಿಗಿಟ್ಟು ಅದರಲ್ಲಿ ಕೇಕ್ ಟ್ರೇಯನ್ನು ಇಟ್ಟು 35ರಿಂದ 40 ನಿಮಿಷಗಳವರೆಗೆ ಬೇಯಿಸಿಕೊಳ್ಳಿ.
* ನಂತರ ಟ್ರೇಯನ್ನು ಹೊರತೆಗೆದು ಬಿಸಿ ಆರಲು ಬಿಡಿ. ಬಳಿಕ ಕೇಕ್‍ನ ಮೇಲ್ಭಾಗದಲ್ಲಿರುವ ಕಂದು ಬಣ್ಣದ ಪದರವನ್ನು ಕತ್ತರಿಸಿ ತೆಗೆಯಿರಿ. ಅದೇ ರೀತಿ ಸುತ್ತಲಿರುವ ಪದರವನ್ನು ತೆಗೆಯಿರಿ.
* ಬಳಿಕ ಟ್ರೇಯಿಂದ ಕೇಕ್ ಅನ್ನು ಹೊರತೆಗೆದು ಒಂದು ಪ್ಲೇಟ್‍ಗೆ ಹಾಕಿಕೊಳ್ಳಿ.
* ಈಗ ಒಂದು ಪ್ಯಾನ್‍ನಲ್ಲಿ 2 ಚಮಚ ಸಕ್ಕರೆಯನ್ನು ಹಾಕಿಕೊಂಡು ಅದಕ್ಕೆ 2 ಚಮಚ ನೀರನ್ನು ಹಾಕಿಕೊಂಡು ಸಕ್ಕರೆ ಕರಗುವವರೆಗೆ ಗ್ಯಾಸ್‍ನಲ್ಲಿ ಬಿಸಿಗಿಡಿ. ಸಕ್ಕರೆ ಕರಗಿದ ಬಳಿಕ ಗ್ಯಾಸ್ ಆಫ್ ಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಬೌಲ್‍ನಲ್ಲಿ ತೆಗೆದಿಡಿ.
* ಮತ್ತೆ ಅದೇ ಪ್ಯಾನ್‍ಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಂಡು ಅದಕ್ಕೆ 3ರಿಂದ 4 ಚಮಚ ಜಾಮ್ ಅನ್ನು ಹಾಕಿಕೊಂಡು ಜಾಮ್ ಕರಗುವವರೆಗೆ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ.
* ಬಳಿಕ ಕೇಕ್ ಮೇಲೆ ಸುತ್ತಲೂ ಸಕ್ಕರೆ ಮಿಶ್ರಣವನ್ನು ಹಚ್ಚಿಕೊಳ್ಳಿ. ಬಳಿಕ ಅದರ ಮೇಲೆ ಜಾಮ್ ಮಿಶ್ರಣವನ್ನು ಸರಿಯಾಗಿ ಹಾಕಿಕೊಳ್ಳಿ. ನಂತರ ಅದರ ಮೇಲೆ ಕೊಬ್ಬರಿ ತುರಿಯನ್ನು ಉದುರಿಸಿಕೊಳ್ಳಿ.
* ಬಳಿಕ ಇದನ್ನು ಚೌಕಾಕಾರದಲ್ಲಿ ತುಂಡರಿಸಿಕೊಂಡು ಸರ್ವಿಂಗ್ ಪ್ಲೇಟ್‍ಗೆ ಹಾಕಿ ಸವಿಯಲು ಕೊಡಿ. ಇದನ್ನೂ ಓದಿ: ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್