ಕೆಲಸವಿಲ್ಲದ ನಿರುದ್ಯೋಗಿ ನಾಯಕರಿಂದ ಚಪಲಕ್ಕೆ ಆಪರೇಷನ್ ಕಮಲದ ಪ್ರಯತ್ನ: ಡಿಕೆಶಿ ವಾಗ್ದಾಳಿ

Public TV
2 Min Read

ನವದೆಹಲಿ: ಮಾಡಲು ಕೆಲಸವಿಲ್ಲದ ನಿರುದ್ಯೋಗಿ ನಾಯಕರು ಚಪಲಕ್ಕೆ ಆಪರೇಷನ್ ಕಮಲಕ್ಕೆ (Operation Kamala) ಪ್ರಯತ್ನ ಮಾಡುತ್ತಿದ್ದಾರೆ. ಯಾವ ಶಾಸಕರನ್ನು ಸಂಪರ್ಕಿಸಿದ್ದಾರೆ ಎಲ್ಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ಇದೆ. ನಮ್ಮ ಒಬ್ಬ ಶಾಸಕರನ್ನೂ ಸೆಳೆಯುವ ಶಕ್ತಿ ಅವರಿಗಿಲ್ಲ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ನವದೆಹಲಿಯಲ್ಲಿ (New Delhi) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಬಿಜೆಪಿಯಲ್ಲಿ (BJP) ಸಾಕಷ್ಟು ಸಮಸ್ಯೆಗಳಿದೆ. ಅವುಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಮೂಲಕ ಗೊಂದಲ ಸೃಷ್ಠಿಸಿ, ಮಾರ್ಕೆಟ್‌ನಲ್ಲಿ ಚಲಾವಣೆಯಲ್ಲಿರುವುದು ಅವರ ಉದ್ದೇಶವಾಗಿದೆ. ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿಯವ್ರು ಪಕ್ಷಕ್ಕೆ ಬರುವಾಗ ಜಾಮೂನು ಕೊಡ್ತಾರೆ, ಅಧಿಕಾರ ಮುಗಿದಾಗ ವಿಷ ಕೊಡ್ತಾರೆ: ಎಸ್‌ಟಿಎಸ್ ಕಿಡಿ

ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೋಳಿ ಭೇಟಿಯಾದ ಬಗ್ಗೆ ಮಾತನಾಡಿ, ನಾನು ಪಕ್ಷದ ಅಧ್ಯಕ್ಷ, ಹೆಡ್ ಆಫ್ ದಿ ಫ್ಯಾಮಿಲಿ. ಎಲ್ಲಾ ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ನಮ್ಮ ಮನೆಯಲ್ಲಿ ಕಾರ್ಯಕರ್ತರೇ ತುಂಬಿಕೊಳ್ಳುವುದರಿಂದ ಅಲ್ಲಿ ಚರ್ಚೆ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಸತೀಶ್ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಇಲ್ಲೇ ಇದ್ದು ಉತ್ತರ ಪ್ರದೇಶದ ಮೊಬೈಲ್ ಲೊಕೇಶನ್ – ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆರ್.ಡಿ ಪಾಟೀಲ್

ನಾನು ಬರೀ ಸತೀಶ್ ಜಾರಕಿಹೊಳಿಯನ್ನು ಮಾತ್ರ ಭೇಟಿಯಾಗಿಲ್ಲ. ಜಿ. ಪರಮೇಶ್ವರ್, ರಾಮಲಿಂಗಾ ರೆಡ್ಡಿ ಸೇರಿ ಅನೇಕ ನಾಯಕರ ಮನೆಗೆ ತೆರಳಿ ಪಕ್ಷದ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಅದರಲ್ಲಿ ವಿಶೇಷ ಏನೂ ಇಲ್ಲ. ರಾಜ್ಯದಲ್ಲಿ ಎರಡು ಪವರ್ ಸೆಂಟರ್ ಇಲ್ಲ. ಸಿಎಂ ಅವರ ಕೆಲಸ ಮಾಡುತ್ತಿದ್ದಾರೆ. ನಾನು ಪಕ್ಷದ ಅಧ್ಯಕ್ಷ, ಡಿಸಿಎಂ ಆಗಿ ನಾನು ನನ್ನ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧವಿದೆ – ಜೆಡಿಎಸ್‌ ವಿರುದ್ಧ ಕಂದಕೂರು ರೆಬೆಲ್‌

ಸಂಪುಟ ಪುನಾರಚನೆ ಮಾಡುವ ವಿಚಾರದ ಬಗ್ಗೆ ಮಾತನಾಡಿ, ಸರ್ಕಾರದ ಮುಂದೆ ಆ ತರಹದ ಆಲೋಚನೆಗಳಿಲ್ಲ. ಯಾರನ್ನು ಸಂಪುಟದಿಂದ ಕೈಬಿಡುವುದಿಲ್ಲ. ಇದು ಊಹಾಪೋಹ ಎಂದರು. ನವಂಬರ್ 15ರ ಬಳಿಕ ನಿಗಮ ಮಂಡಳಿಗಳ ನೇಮಕ ಆಗಲಿದೆ. ಹೈಕಮಾಂಡ್ ನಾಯಕರೇ ಬಂದು ಪಟ್ಟಿ ಫೈನಲ್ ಮಾಡಲಿದ್ದಾರೆ. ಸದಾಶಿವ ವರದಿ ಜಾರಿ ಬಗ್ಗೆ ಈ ಮೊದಲು ಪಕ್ಷ ಕೊಟ್ಟ ಮಾತು ಉಳಿಸಿಕೊಳ್ಳಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಕುಡಿಯುವ ನೀರಿಗೆ ಕಾವೇರಿಯಿಂದ 24 ಟಿಎಂಸಿ ಬಳಕೆ: ಡಿಕೆಶಿ

Share This Article