SSLC ಫಲಿತಾಂಶ ಹೆಚ್ಚಳಕ್ಕೆ ಕ್ರಮ – 29 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಶಿಕ್ಷಣ ಇಲಾಖೆ

Public TV
2 Min Read

ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ (Education Department) 29 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.

ಈ ಕುರಿತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಆದೇಶ ಹೊರಡಿಸಿದ್ದು, 29 ಅಂಶಗಳ ಈ ಕಾರ್ಯಕ್ರಮವನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿದ್ದಾರೆ.ಇದನ್ನೂ ಓದಿ: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ – ಸುದ್ದಿ ತಿಳಿದ ತಂದೆ ಹೃದಯಾಘಾತಕ್ಕೆ ಬಲಿ

29 ಅಂಶಗಳ ಕಾರ್ಯಕ್ರಮವೇನು?
– ಡಿಸೆಂಬರ್ ಅಂತ್ಯದ ಒಳಗೆ ಪಠ್ಯಕ್ರಮ ಪೂರ್ಣಗೊಳಿಸಬೇಕು.
– ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿಯೇ ಪರಿಹಾರ ಬೋಧನೆಗೆ ಕ್ರಮವಹಿಸಬೇಕು.
– ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಮಾಡಿ, ಶಾಲೆ ಮುಗಿದ ನಂತರ ವಿದ್ಯಾರ್ಥಿಗಳ ಬರವಣಿಗೆ ಗುಣಮಟ್ಟ ಹೆಚ್ವಿಸಲು, ಓದುವ ಅಭ್ಯಾಸ ಮಾಡಿಸುವುದು.
– ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಅವಧಿಯಲ್ಲಿ ಚಟುವಟಿಕೆಗಳನ್ನು ಮಾಡಿಸುವುದು.
– ಮೊಬೈಲ್ ಫೋನ್ ಬಳಕೆ ಸೀಮಿತ ಮಾಡುವುದು.
– ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ ಸರಿಯಾಗಿ ನೀಡಿ ಸಮತೋಲನ ಆರೋಗ್ಯ ಶೈಲಿ ರೂಪಿಸುವುದು.
– ಶಾಲೆಗಳಲ್ಲಿ ತಿಂಗಳಿಗೆ ಎರಡು ಬಾರಿ ಪೋಷಕರ ಹಾಗೂ ಶಿಕ್ಷಕರ ಸಭೆ ನಡೆಸುವುದು.
– ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಮಾದರಿ ಪ್ರಶ್ನೆ ಪತ್ರಿಕೆ ಸಹಾಯ ಮಾಡಲು ಕ್ರಮವಹಿಸುವುದು.
– ವಿಷಯವಾರು ನೀಲಿ ನಕ್ಷೆ ಪ್ರಕಟಿಸಲು ಕ್ರಮವಹಿಸುವುದು.
– ಪೂರ್ವ ಸಿದ್ದತಾ ಪರೀಕ್ಷೆಗಳಿಗೆ ಅಗತ್ಯ ಕ್ರಮವಹಿಸುವುದು.
– ಆರೋಗ್ಯ ಇಲಾಖೆ ಸಹಾಯದಲ್ಲಿ ಶಾಲೆಯಲ್ಲಿಯೇ ಆರೋಗ್ಯ ತಪಾಸಣೆ ನಡೆಸುವುದು.
– ಶಾಲೆಯಲ್ಲಿಯೇ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಗಾರ ಮಾಡುವುದು
– ಕಡಿಮೆ ಸಾಧನೆಯ ಶಾಲೆಗಳನ್ನು ಗುರುತಿಸಿ ಫಲಿತಾಂಶ ವೃದ್ಧಿಗೆ ಕ್ರಮವಹಿಸುವುದು
– ಶಾಲೆಗೆ ವಿದ್ಯಾರ್ಥಿಗಳು ಗೈರಾಗದಂತೆ ಕ್ರಮವಹಿಸುವುದು.
– ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದು.
– 10ನೇ ತರಗತಿಯ ವಿಷಯವಾರು, ಘಟಕವಾರು ಪ್ರಶ್ನೆ ಕೋಷ ತಯಾರಿ ಮಾಡುವುದು.
– ಶಾಲೆಗಳಲ್ಲಿ ಇಬ್ಬರು ವಿದ್ಯಾರ್ಥಿಗಳ ಗುಂಪು ಮಾಡುವ ಮೂಲಕ ನಿಧಾನಗತಿ ಕಲಿಕಾ ವಿದ್ಯಾರ್ಥಿಗಳಿಗೆ ಕಲಿಕೆಯ ಬಲವರ್ಧನೆ ಮಾಡುವುದು.ಇದನ್ನೂ ಓದಿ: ಪ್ರದೀಪ್‌ ಈಶ್ವರ್‌ ಬೆಂಬಲಿಗನ ಮನೆ ಮೇಲೆ ಡಿಆರ್‌ಐ ದಾಳಿ

Share This Article