ಬೆಂಗಳೂರು: ಈದ್ಗಾ ಮೈದಾನಕ್ಕಾಗಿ ಹಿಂದೂಗಳ ಮತ್ತೊಂದು ಸುತ್ತಿನ ಹೋರಾಟ ಆರಂಭವಾಗಿದೆ. ಇಂದು ಚಾಮರಾಜಪೇಟೆ ನಾಗರಿಕ ಒಕ್ಕೂಟ, ಶ್ರೀರಾಮಸೇನೆ, ಹಿಂದೂ ಜನಜಾಗೃತಿ ಸೇರಿದಂತೆ ಅನೇಕ ಹಿಂದೂ ಸಂಘಟನೆ ಬಂದ್‍ಗೆ ಕರೆ ಕೊಟ್ಟಿವೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚಾಮರಾಜಪೇಟೆ ಬಂದ್ ಆಗಲಿದೆ.
ಈದ್ಗಾ ಆಟದ ಮೈದಾನವನ್ನು ವಕ್ಫ್‍ಗೆ ನೀಡಬಾರದು. ಮೈದಾನ ಬಿಬಿಎಂಪಿ ಸುಪರ್ದಿಯಲ್ಲಿಯೇ ಇದ್ದು ಆಟದ ಮೈದಾನವಾಗಿರಬೇಕು. ಮೈದಾನಕ್ಕೆ ಈದ್ಗಾ ಹೆಸರಿಗೆ ಬದಲಾಗಿ ಜಯಚಾಮರಾಜ ಒಡೆಯರ್ ಹೆಸರು ಇಡಬೇಕು ಎಂದು ಸಂಘಟನೆಗಳು ಒತ್ತಾಯಿಸ್ತಿವೆ. ಅಂಗಡಿ-ಮುಂಗಟ್ಟುಗಳು, ಬ್ಯಾಂಕ್, ಕಾಲೇಜು, ವಾಣಿಜ್ಯ ಕಟ್ಟಡಗಳಲ್ಲಿ ಭಿತ್ತಿ ಪತ್ರ ಹಂಚಿ ಬಂದ್‍ಗೆ ಬೆಂಬಲ ಕೊಡುವಂತೆ ಹೋರಾಟಗಾರರು ಮನವಿ ಮಾಡಿದ್ದಾರೆ. ಬಂದ್‍ಗೆ ವ್ಯಾಪಾರಿಗಳು ಬೆಂಬಲ ಘೋಷಿಸಿದ್ದಾರೆ. ಇನ್ನು ಬಂದ್‍ಗೆ ಕರೆಕೊಟ್ಟವರು ಸ್ಥಳೀಯರಲ್ಲ ಎಂಬ ಜಮೀರ್ ಹೇಳಿಕೆಗೆ ಲಹರಿ ವೇಲು ತಿರುಗೇಟು ನೀಡಿದ್ದಾರೆ.
ಏನಿರಲ್ಲ..?: ಎಲ್ಲ ವಾರ್ಡ್‍ಗಳಲ್ಲಿಯೂ ಬಂದ್ ಬಿಸಿ ತಟ್ಟುವ ಸಾಧ್ಯತೆ ಇದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳು ಬಂದ್ ಸಾಧ್ಯತೆಗಳಿವೆ. ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ, ಚಾಮರಾಜಪೇಟೆಯ ಪ್ರಮುಖ ಮಂಡಿ ಕ್ಲೋಸ್ ಸಾಧ್ಯತೆಗಳು ಹೆಚ್ಚಾಗಿವೆ. ಹೋಟೆಲ್‍ಗಳು ಇರೋದು ಬಹುತೇಕ ಅನುಮಾನವಾಗಿದೆ. ಈದ್ಗಾ ಸುತ್ತಮುತ್ತ ರಸ್ತೆಯಲ್ಲಿ ಬಹುತೇಕ ಬಂದ್ ಬಿಸಿ ಹೆಚ್ಚಿರಲಿದೆ. ಖಾಸಗಿ ಕಚೇರಿಗಳು ಬಂದ್ ಆಗುವ ಸಾಧ್ಯತೆ ಇದೆ.
ಏನಿರುತ್ತೆ..?: ಔಷಧಿ ಅಂಗಡಿಗಳು, ಆಸ್ಪತ್ರೆಗಳು, ಹಣ್ಣು-ತರಕಾರಿ, ಹಾಲು, ದಿನಸಿ ಅಂಗಡಿ, ಬ್ಯಾಂಕ್ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಶಾಲಾ-ಕಾಲೇಜು ತೆರೆದಿರುತ್ತವೆ, ಎಟಿಎಂ ಇರುತ್ತೆ ಹಾಗೂ ವಾಹನ ಸಂಚಾರ ಯಥಾಸ್ಥಿತಿ ಇರಲಿದೆ. ಇದನ್ನೂ ಓದಿ: ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು
ಈಗಾಗಲೇ ಪ್ರತಿಭಟನೆಗೆ ವರ್ತಕರ ಸಂಘಗಳು ಸಂಪೂರ್ಣ ಬೆಂಬಲ ಘೋಷಿಸಿದ್ದು ಚಾಮರಾಜಪೇಟೆಯಲ್ಲಿ ವಾಣಿಜ್ಯ ವಹಿವಾಟು ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ವ್ಯಾಪಾರ ಒಂದಿನ ಹೋದ್ರೂ ಪರವಾಗಿಲ್ಲ, ನಮಗೆ ಆಟದ ಮೈದಾನ ಮುಖ್ಯ ಎನ್ನುವ ನಿಲುವನ್ನು ವ್ಯಾಪಾರಿಗಳು ವ್ಯಕ್ತಪಡಿಸಿದ್ದು ಬಂದ್‍ಗೆ ಬೆಂಬಲ ನೀಡೋದಾಗಿ ಹೇಳಿದ್ದಾರೆ.
ಇಂದಿನ ಬಂದ್‍ನ್ನು ಹಿಂದೂ ಸಂಘಟನೆಗಳಂತೂ ಪ್ರತಿಷ್ಠೆಯ ಅಖಾಡವಾಗಿಯೇ ಬದಲಾಯಿಸಿದೆ. ಶಾಸಕ ಜಮೀರ್‍ಗೆ ಠಕ್ಕರ್ ಕೊಡಲು ನಿರ್ಧಾರ ಮಾಡಿಬಿಟ್ಟಿವೆ. ಇನ್ನು ಬಂದ್ ಜೊತೆಗೆ ಇದೇ ಶುಕ್ರವಾರ ಬೃಹತ್ ಬೈಕ್ ರ್ಯಾಲಿಯ ಮೂಲಕ ಮಗದೊಂದು ಶಕ್ತಿಪ್ರದರ್ಶನಕ್ಕೆ ಸಂಘಟನೆಗಳು ನಿರ್ಧರಿಸಿದೆ.