ಬೆಂಗಳೂರು, ಮೈಸೂರಿನ ಪ್ರತಿಷ್ಠಿತ ಬಿಲ್ಡರ್‌ಗಳ ಮನೆ ಮೇಲೆ ಇಡಿ ದಾಳಿ – 11 ಸ್ಥಳಗಳಲ್ಲಿ ಶೋಧ

Public TV
1 Min Read

ಬೆಂಗಳೂರು/ಮೈಸೂರು: ಬೆಂಗಳೂರು (Bengaluru) ಹಾಗೂ ಮೈಸೂರಿನ (Mysuru) ಪ್ರತಿಷ್ಠಿತ ಬಿಲ್ಡರ್‌ಗಳ (Builders) ಮನೆ ಮತ್ತು ಕಚೇರಿಗಳ ಮೇಲೆ ಇ.ಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ.

ಬೆಂಗಳೂರಿನ ಯುಬಿ ಸಿಟಿಯ ಕಿಂಗ್ ಫಿಶರ್ ಟವರ್, ಮಲ್ಲೇಶ್ವರಂ, ಬಸವೇಶ್ವರನಗರ, ಬನ್ನೇರುಘಟ್ಟ ರೋಡ್, ಹನುಮಂತನಗರ ಹಾಗೂ ಮೈಸೂರಿನ ಎರಡು ಸ್ಥಳಗಳಲ್ಲಿ ಸೇರಿದಂತೆ ಒಟ್ಟು 11 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. ಇದನ್ನೂ ಓದಿ: ರೈತರ ಬೃಹತ್‌ ಪ್ರತಿಭಟನೆ – ಮೈಮೇಲೆ ಸಗಣಿ ಬಳಿದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ

ಸೈಟ್ ಕೊಡಿಸುವುದಾಗಿ ವಂಚನೆ, ಅಕ್ರಮ ವ್ಯವಹಾರ, ಆಸ್ತಿ ತೆರಿಗೆ ಪಾವತಿಯಲ್ಲಿ ವಂಚನೆ ಸೇರಿದಂತೆ ಹಲವು ದೂರುಗಳು ಬಂದ ಹಿನ್ನೆಲೆ ದಾಳಿ ಮಾಡಲಾಗಿದೆ. ಬಿಲ್ಡರ್‌ಗಳು ಮತ್ತು ಕೆಲ ಕಂಪನಿಗಳ ವಿರುದ್ಧ ಅನೇಕ ಅವ್ಯವಹಾರಗಳು ಕುರಿತು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪವಿತ್ರಾಗೌಡಗೆ ಕೋಟಿ ಕೋಟಿ ಹಣ ಕೊಟ್ಟಿದ್ರಾ ಸೌಂದರ್ಯ ಜಗದೀಶ್?

Share This Article