ಕಾಂಗ್ರೆಸ್ ನಾಯಕಿ ಕುಸುಮಾ ಮನೆ ಮೇಲೆ ಇಡಿ ದಾಳಿ

Public TV
0 Min Read

ಬೆಂಗಳೂರು: ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡರಿಗೆ ಜಾರಿ ನಿರ್ದೇಶನಾಲಯ (ED) ಶಾಕ್ ಕೊಟ್ಟಿದ್ದು, ರಾಜರಾಜೇಶ್ವರಿನಗರದ ಮುಖಂಡರಾದ ಕುಸುಮಾ (Kusuma) ಮನೆ ಮೇಲೆ ದಾಳಿ ನಡೆಸಿದೆ.

ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಅವರೊಂದಿಗೆ ಆರ್ಥಿಕ ವ್ಯವಹಾರ ಹೊಂದಿದ್ದ ಹಿನ್ನೆಲೆ ದಾಳಿ (ED Raid) ನಡೆಸಲಾಗಿದ್ದು, ಬೆಳಗ್ಗೆಯಿಂದಲೇ ಇಡಿ ಶೋಧ ಆರಂಭಿಸಿದೆ. ಇದನ್ನೂ ಓದಿ: ಚಿತ್ರದುರ್ಗ | ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಮನೆಗಳ ಮೇಲೆ ಇಡಿ ದಾಳಿ

16 ಕಡೆ ಇಡಿ ದಾಳಿ
ಕರ್ನಾಟಕದ ಬೆಂಗಳೂರು, ಚಳ್ಳಕೆರೆ, ಚಿತ್ರದುರ್ಗ ಹಾಗೂ ಗೋವಾ ಸೇರಿದಂತೆ 16 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಶಾಸಕ ವಿರೇಂದ್ರ ಪಪ್ಪಿ ಅವರಿಗೆ ಸೇರಿದ ಚಿತ್ರದುರ್ಗ ಮತ್ತು ಬೆಂಗಳೂರಿನ ಪ್ರೆಸ್ಟೀಜ್ ಎಡ್ವರ್ಡಿಯನ್ ಅಪಾರ್ಟ್ಮೆಂಟ್‌ ಫ್ಲಾಟ್‌ ಸೇರಿದಂತೆ ನಾಲ್ಕು ಮನೆಗಳ ಮೇಲೆ ಇಡಿ ತಂಡ ದಾಳಿ ನಡೆಸಿದೆ. ಇದನ್ನೂ ಓದಿ: ಶಾಸಕ ಪ್ರಕಾಶ್‌ ಕೋಳಿವಾಡ ಆಪ್ತಸಹಾಯಕನ ಮನೆಗೆ ಕನ್ನ

ಕಾರಣ ಏನು?
ಅಕ್ರಮ ಹಣ ವರ್ಗಾವಣೆ, ವೀರೇಂದ್ರ ಪಪ್ಪಿ ಒಡೆತನದ ಕಂಪನಿಗಳಿಂದ ಗೇಮಿಂಗ್ ಆಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪಪ್ಪಿ ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ. ಆನ್‌ಲೈನ್‌ ಗೇಮಿಂಗ್‌ ವಿಚಾರದಲ್ಲಿ ಪಪ್ಪಿ ವಿರುದ್ಧ 2 ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ದಾಳಿ ನಡಸಲಾಗಿದ್ದು, ಪಪ್ಪಿ ಕಂಪನಿಗಳ ವ್ಯವಹಾರ ಸೇರಿದಂತೆ ಗೋವಾ ಉದ್ಯಮದ ಸಂಪೂರ್ಣ ವ್ಯವಹಾರದ ಬಗ್ಗೆಯೂ ಮಾಹಿತಿಗಳನ್ನ ಕಲೆಹಾಕುತ್ತಿದ್ದಾರೆ. ಬೆಳಗ್ಗೆ ಸುಮಾರು 5 ಗಂಟೆಯಿಂದಲೂ ಶೋಧ ಕಾರ್ಯ ಶುರುವಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಕೊಲೆ, ತಮಿಳುನಾಡಿನಲ್ಲಿ ಶವ ಪತ್ತೆ – 6 ವರ್ಷಗಳ ಬಳಿಕ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಪೊಲೀಸ್‌

Share This Article