ಆಪ್ ನಾಯಕ ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ

Public TV
2 Min Read

– 12 ಸ್ಥಳಗಳಲ್ಲಿ ದಾಖಲೆಗಳಿಗಾಗಿ ಶೋಧ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಮಾಜಿ ಸಚಿವ ಹಾಗೂ ಹಿರಿಯ ಆಮ್ ಆದ್ಮಿ ಪಕ್ಷದ ನಾಯಕ (AAP leader) ಸೌರಭ್ ಭಾರದ್ವಾಜ್ (Saurabh Bhardwaj) ಅವರಿಗೆ ಸೇರಿದ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ (Enforcement Directorate) ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಜಿಎನ್‌ಸಿಟಿಡಿ ಆರೋಗ್ಯ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಸೌರಭ್ ಭಾರದ್ವಾಜ್ ಭಾಗಿಯಾಗಿದ್ದಾರೆ ಎಂದು ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆರೋಪಿಸಿದ್ದರು. ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಬಲ; 2 ನೀಲಗಿರಿ ವರ್ಗದ ಯುದ್ಧನೌಕೆಗಳ ನಿಯೋಜನೆ

ಈ ಸಂಬಂಧ ಮಂಗಳವಾರ ಇಡಿ ಅಧಿಕಾರಿಗಳು ಸೌರಭ್ ಭಾರದ್ವಾಜ್ ಅವರಿಗೆ ಸೇರಿದ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಮಂತ್ರಾಲಯ ಶ್ರೀಗಳಿಂದ ಪರಿಸರ ಜಾಗೃತಿ – 100ಕ್ಕೂ ಹೆಚ್ಚು ಮಣ್ಣಿನ ಗಣೇಶ ವಿತರಣೆ

2018-2019ರಲ್ಲಿ, ಆಪ್ ನೇತೃತ್ವದ ದೆಹಲಿ ಸರ್ಕಾರವು 24 ಆಸ್ಪತ್ರೆಗಳ ನಿರ್ಮಾಣಕ್ಕಾಗಿ 5,590 ಕೋಟಿ ರೂ. ಹಣದ ಯೋಜನೆಗಳನ್ನು ಅನುಮೋದಿಸಿತ್ತು. ಐಸಿಯು ಆಸ್ಪತ್ರೆಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ ಮೂರು ವರ್ಷಗಳ ನಂತರವೂ ಕೆಲಸ ಅಪೂರ್ಣವಾಗಿಯೇ ಇತ್ತು. 800 ಕೋಟಿ ರೂ. ಹಣ ಖರ್ಚು ಮಾಡಿದರೂ, 50% ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್ ದಾಖಲಿಸಿತ್ತು.

ದಾಳಿ ವೇಳೆ ವಶಪಡಿಸಿಕೊಂಡ ಆಸ್ತಿಗಳ ವಿವರ ಮತ್ತು ಪತ್ತೆಯಾದ ಆರ್ಥಿಕ ಅಕ್ರಮಗಳ ವಿವರಗಳನ್ನು ಕೇಂದ್ರ ತನಿಖಾ ಸಂಸ್ಥೆ ಇನ್ನೂ ಬಹಿರಂಗಪಡಿಸಿಲ್ಲ.

ಗ್ರೇಟರ್ ಕೈಲಾಶ್‌ನಿಂದ ಮೂರು ಬಾರಿ ಶಾಸಕರಾಗಿರುವ ಭಾರದ್ವಾಜ್, ದೆಹಲಿಯ ಆರೋಗ್ಯ, ನಗರಾಭಿವೃದ್ಧಿ ಮತ್ತು ಜಲ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ದೆಹಲಿ ಜಲ ಮಂಡಳಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದನ್ನೂ ಓದಿ: ರಾಹು-ಕೇತು ದೋಷಗಳನ್ನು ಗಣೇಶ ಹೇಗೆ ಗುಣಪಡಿಸುತ್ತಾನೆ?

ಇಡಿ ದಾಳಿ ಬೆನ್ನಲ್ಲೇ ಎಎಪಿ ನಾಯಕಿ, ಮಾಜಿ ಸಿಎಂ ಆತಿಶಿ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಇದು ಪ್ರಧಾನಿ ಮೋದಿ ಅವರ ಪದವಿ ವಿಚಾರದ ಕುರಿತ ವಿಷಯವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ.

ಅಲ್ಲದೇ ಎಎಪಿ ನಾಯಕ ಮನೀಶ್ ಸಿಸೋಡಿಯಾ ಪ್ರತಿಕ್ರಿಯಿಸಿ, ಸೋಮವಾರ ಇಡೀ ದೇಶವೇ ಪ್ರಧಾನಿ ಮೋದಿಯವರ ಪದವಿ ಕುರಿತು ಪ್ರಶ್ನೆ ಎತ್ತಿತ್ತು. ಯಾವಾಗೆಲ್ಲಾ ಪದವಿ ವಿಚಾರ ಹೊರಬಂದಿದೆಯೋ ಆ ಸಂದರ್ಭಗಳಲ್ಲೆಲ್ಲ ಗಮನ ಬೇರೆಡೆ ಸೆಳೆಯಲು ಈ ರೀತಿ ದಾಳಿ ನಡೆಸಲಾಗಿತ್ತು ಎಂದು ದೂರಿದ್ದಾರೆ.

Share This Article