– ಹಾರ್ಡ್‌ಡಿಸ್ಕ್, ವಿದೇಶಿ ವ್ಯವಹಾರದ ಬ್ಯಾಂಕ್ ದಾಖಲೆಗಳು ವಶಕ್ಕೆ
ಬೆಂಗಳೂರು: ಬಿಟ್ ಕಾಯಿನ್ ಹಗರಣ (Bit Coin Case) ಪ್ರಕರಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ (Mohammed Nalapad) ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಸತತ 21 ಗಂಟೆಗಳ ಶೋಧ ಕಾರ್ಯ ನಡೆಸಿದೆ. ಈ ವೇಳೆ ಹಾರ್ಡ್‌ಡಿಸ್ಕ್, ವಿದೇಶಿ ವ್ಯವಹಾರದ ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.
ಬೆಂಗಳೂರಿನ ಅಶೋಕನಗರದ ನಲಪಾಡ್ ಮನೆಗೆ ನಿನ್ನೆ ಬೆಳಗ್ಗೆ ಇಡಿ (ED Raid) ತಂಡ 6:30ಕ್ಕೆ ಎಂಟ್ರಿ ಕೊಟ್ಟಿತ್ತು. ನಂತರ ಮಾರನೇ ದಿನ ಮುಂಜಾನೆ 3:30ಕ್ಕೆ ದಾಳಿ ಮುಗಿಸಿ ಮನೆಯಿಂದ ಇಡಿ ತೆರಳಿದೆ. ಸತತ 21 ಗಂಟೆಗಳ ಸುದೀರ್ಘ ಶೋಧ ಕಾರ್ಯವನ್ನು ಇಡಿ ನಡೆಸಿದೆ. ಇದನ್ನೂ ಓದಿ: ನಲಪಾಡ್ ಮನೆ ಮೇಲೆ ಇಡಿ ದಾಳಿಗೆ ಆ 10 ಲಕ್ಷ ಕಾರಣಾನಾ?
14 ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದರು. ಆದರೆ, ಅಂದಿನ ಕೆಲ ದಾಖಲೆಗಳು ಸದ್ಯಕ್ಕೆ ಸಿಕ್ಕಿಲ್ಲ. ನಲಪಾಡ್ ವಿದೇಶಿ ವ್ಯವಹಾರ, ಹೂಡಿಕೆ ಕುರಿತು ದಾಖಲೆ ಕಲೆಹಾಕಿದ್ದಾರೆ. ಮಹತ್ವದ ದಾಖಲೆಗಳು, ಡಿಜಿಟಲ್ ಡಾಕ್ಯುಮೆಂಟ್ ಅನ್ನು ಇಡಿ ವಶಕ್ಕೆ ಪಡೆದಿದೆ.
ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ಅಧಿಕಾರಿಗಳು ಹೊರಟರು. ಮೂರು ಕಾರುಗಳಲ್ಲಿ 14 ಅಧಿಕಾರಿಗಳು ನಲಪಾಡ್ ಮನೆಯಿಂದ ಹೊರಟರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ

