ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ – ಡಿಕೆಶಿ

Public TV
1 Min Read

ಬೆಂಗಳೂರು: ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) ಅವರಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದರು.ಇದನ್ನೂ ಓದಿ: ಬೆಂಗ್ಳೂರಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಶೋರೂಂ – 70 ಬೈಕ್‌ಗಳು ಭಸ್ಮ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿ, ಬೈರತಿ ಸುರೇಶ್‌ಗೆ ನೋಟಿಸ್ ವಿಚಾರವಾಗಿ ಇದೆಲ್ಲಾ ರಾಜಕೀಯ ಪ್ರೇರಿತ. ನನ್ನ ಕೇಸ್‌ನಲ್ಲಿಯೂ ಇದೇ ರೀತಿ ಆಗಿತ್ತು. ಎರಡು ಘಟನೆಗಳು ಒಂದೇ ಸಲ ನಡೆಯಲ್ಲ. ಈಗಾಗಲೇ ಲೋಕಾಯುಕ್ತದಲ್ಲಿ ತನಿಖೆ ನಡೀತಿದೆ. ಈ ವೇಳೆ ಬೇರೆ ಸಂಸ್ಥೆಯವರು ತನಿಖೆ ಮಾಡೋದಕ್ಕೆ ಆಗಲ್ಲ ಎಂದು ಅನೇಕ ತೀರ್ಪಿನಲ್ಲಿದೆ. ಅದೇನು ಎಂದು ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ. ನನ್ನ ಕೇಸ್‌ನಲ್ಲಿ ಸಿಬಿಐ ಮತ್ತು ಇಡಿಯವರು ತನಿಖೆ ಮಾಡುತ್ತಿದ್ದರು. ಈ ರೀತಿ ಮಾಡೋದಕ್ಕೆ ಬರಲ್ಲ ಎಂದು ಕೆಲವು ಜಡ್ಜ್ಮೆಂಟ್ ಇದೆ. ನಮ್ಮ ಸ್ಟ್ಯಾಂಡ್ ಕ್ಲಿಯರ್ ಇದೆ. ಇದೆಲ್ಲ ರಾಜಕೀಯ ಪ್ರೇರಿತ ಎಂದರು.

ಐದು ವರ್ಷ ಸಿದ್ದರಾಮಯ್ಯ ಸಿಎಂ ಎಂಬ ಬಗ್ಗೆ ನಾಯಕರ ಹೇಳಿಕೆ ವಿಚಾರವಾಗಿ, ಅವರು ಯಾರು ಏನೂ ಮಾತಾಡಿಲ್ಲ. ಸರ್ಕಾರ ಸುಭದ್ರವಾಗಿದೆ. ನಾವೆಲ್ಲಾ ಸಿಎಂ ಕೆಳಗೆ ಕೆಲಸ ಮಾಡುತ್ತಿದ್ದೇವೆ. ಯಾವ ಐದು ವರ್ಷವೂ ಇಲ್ಲ ಎಂದಿದ್ದಾರೆ.ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆ – 14 ತಿದ್ದುಪಡಿಗಳಿಗೆ ಜಂಟಿ ಸಮಿತಿಯ ಒಪ್ಪಿಗೆ

 

Share This Article