ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

Public TV
2 Min Read

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ಒದ್ದಾಡುತ್ತಿರುವ ನೆರೆಯ ಪಾಕಿಸ್ತಾನ (Pakistan) ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಒದ್ದಾಡುತ್ತಿದೆ. ಈ ಹಿನ್ನೆಲೆ ಪಾಕಿಸ್ತಾನದ ಸರ್ಕಾರ ಇಂಧನ (Energy) ಉಳಿಸಲು ಮಾರುಕಟ್ಟೆ, ಮಾಲ್, ಮದುವೆ ಹಾಲ್‌ಗಳನ್ನು ಶೀಘ್ರವೇ ಮುಚ್ಚುವುದಾಗಿ ಘೋಷಿಸಿದೆ.

ಇಂಧನ ಉಳಿಸಲು ಹಾಗೂ ಇತರ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಮಾಡಲಾಗಿದೆ. ಈ ಕ್ರಮಕ್ಕೆ ಪಾಕಿಸ್ತಾನದ ಕ್ಯಾಬಿನೆಟ್ ಸಚಿವರು ಅನುಮೋದನೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ಮಾರುಕಟ್ಟೆ ಹಾಗೂ ಮಾಲ್‌ಗಳನ್ನು ಈಗ ರಾತ್ರಿ 8:30ಕ್ಕೆ ಮುಚ್ಚಲಾಗುತ್ತದೆ. ಮದುವೆ ಮಂಟಪಗಳನ್ನು ರಾತ್ರಿ 10:00 ಗಂಟೆಗೆ ಮುಚ್ಚಲಾಗುತ್ತದೆ. ಈ ಕ್ರಮದಿಂದ ನಮಗೆ 60 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶದ ಪರಿಸ್ಥಿತಿಯನ್ನು ನಿಭಾಯಿಸಲು ಪಾಕ್ ಇನ್ನೂ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರಕಾಶಮಾನವಾದ ಬಲ್ಬ್ ಉತ್ಪಾದನೆಯನ್ನು ಫೆಬ್ರವರಿ 1 ರಿಂದ ಸ್ಥಗಿತಗೊಳಿಸಲು ಸೂಚಿಸಲಾಗಿದ್ದು, ಜುಲೈ ತಿಂಗಳಿನಿಂದ ಅಸಮರ್ಥ ಫ್ಯಾನ್‌ಗಳ ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎನ್ನಲಾಗಿದೆ. ಈ ಕ್ರಮದಿಂದ 22 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ಆಸಿಫ್ ತಿಳಿಸಿದ್ದಾರೆ.

ಪಾಕ್ ಸರ್ಕಾರ 1 ವರ್ಷದೊಳಗೆ ಕಡಿಮೆ ವಿದ್ಯುತ್ ಬಳಸುವ ಗೀಸರ್‌ಗಳನ್ನು ಬಳಸಲು ಹಾಗೂ ಹಳೆಯದನ್ನು ಅಥವಾ ಹೆಚ್ಚು ವಿದ್ಯುತ್ ಉಪಯೋಗಿಸುವ ಗೀಸರ್‌ಗಳನ್ನು ಬದಲಿಲು ಜನರಿಗೆ ಕಡ್ಡಾಯವಾದ ಸೂಚನೆ ನೀಡಿದೆ. ಇದರಿಂದ 92 ಶತಕೋಟಿ ರೂ. ಉಳಿತಾಯವಾಗುತ್ತದೆ. ಬೀದಿ ದೀಪಗಳ ಬದಲು ಪರ್ಯಾಯ ದೀಪ ಬಳಕೆಯಿಂದ 4 ಶತಕೋಟಿ ರೂ. ಉಳಿಸಬಹುದು ಎಂದಿದೆ. ಇದನ್ನೂ ಓದಿ: ಹತ್ಯೆ ಕೇಸ್- ಅಮಾನತುಗೊಂಡ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ನೆಲಸಮ

ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಕಚೇರಿಗಳಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲಾಗುತ್ತಿದ್ದು, ಆದಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಮಂಗಳವಾರ ನಡೆದ ಸಂಪುಟ ಸಭೆಯಲ್ಲೂ ಯಾವುದೇ ವಿದ್ಯುತ್ ದೀಪಗಳು ಉರಿಯದೇ ಇದ್ದುದು ವಿಶೇಷವಾಗಿತ್ತು. ಕೇವಲ ಸೂರ್ಯನ ಬೆಳಕಿನಿಂದಲೇ ಸಭೆಯನ್ನು ನಡೆಸಲಾಗಿತ್ತು. ಇದು ಇಡೀ ದೇಶ ಅನುಸರಿಸಲು ಒಂದು ಅತ್ಯುತ್ತಮ ಉದಾಹರಣೆ ಎಂದು ಆಸಿಫ್ ಹೇಳಿದ್ದಾರೆ. ಇದನ್ನೂ ಓದಿ: ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *