ಬಿಹಾರ ಚುನಾವಣೆ ಹೊತ್ತಲ್ಲೇ 334 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದಲೇ ತೆಗೆದ ಚುನಾವಣಾ ಆಯೋಗ

Public TV
1 Min Read

– ನಿಯಮ ಪಾಲಿಸದ ಇನ್ನೂ 2,520 ರಾಜಕೀಯ ಪಕ್ಷಗಳಿವೆ

ನವದೆಹಲಿ: ಬಿಹಾರ ಚುನಾವಣೆ ಹೊತ್ತಿನಲ್ಲೇ ಕೇಂದ್ರ ಚುನಾವಣಾ ಆಯೋಗ (Election Commission) ಮಹತ್ವದ ಹೆಜ್ಜೆಯನ್ನಿಟ್ಟಿದೆ.

2019ರಿಂದ ಈಚೆಗೆ ಚುನಾವಣೆಯಲ್ಲಿ (Election) ಸ್ಪರ್ಧಿಸಲು ಅಗತ್ಯ ಮಾನದಂಡ ಪೂರೈಸಲು ವಿಫಲವಾದ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನ ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಶನಿವಾರ ತಿಳಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಖಾಸಗಿ ಶಾಲೆಗಳ ಫೀಸ್ ನಿಯಂತ್ರಣಕ್ಕೆ ಮುಂದಾದ ಸರ್ಕಾರ – ಇನ್ಮುಂದೆ ಶುಲ್ಕ ಏರಿಕೆಗೆ ಅನುಮತಿ ಕಡ್ಡಾಯ

ಹೌದು. ಈ ಪಕ್ಷಗಳು ಕಳೆದ 6 ವರ್ಷಗಳಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಹಾಗೂ ಭೌತಿಕವಾಗಿ ಎಲ್ಲಿಯೂ ಕಚೇರಿಗಳನ್ನು ತೆರೆದಿಲ್ಲ ಎಂದು ಆಯೋಗ ಹೇಳಿದೆ. ಇದನ್ನೂ ಓದಿ: ಜಾರ್ಖಂಡ್ | ಚಂಡೀಲ್‌ನಲ್ಲಿ ಹಳಿ ತಪ್ಪಿದ 2 ಗೂಡ್ಸ್ ರೈಲಿನ 20 ಬೋಗಿಗಳು – ಸಂಚಾರದಲ್ಲಿ ವ್ಯತ್ಯಯ

ಅಲ್ಲದೇ ಮಾನ್ಯತೆ ಪಡೆಯದ ಇಂತಹ ಇನ್ನೂ 2,520 ರಾಜಕೀಯ ಪಕ್ಷಗಳು (Political Parties) ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಸದ್ಯ 6 ರಾಷ್ಟ್ರೀಯ ಪಕ್ಷಗಳು ಮತ್ತು 67 ಪ್ರಾದೇಶಿಕ ಪಕ್ಷಗಳು ದೇಶದಲ್ಲಿವೆ ಎಂದು ಆಯೋಗ ತಿಳಿಸಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದಲ್ಲಿ ಭಾರತ ಪರಾಕ್ರಮ – ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್‌; ವಾಯುಪಡೆ ಮುಖ್ಯಸ್ಥ

Share This Article