ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್

Public TV
1 Min Read

ಲಕ್ನೋ: ಬೀದಿ ವ್ಯಾಪಾರಿಯೊಬ್ಬ ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿದ್ದು, ಆರೋಗ್ಯ ದೃಷ್ಟಿಯಿಂದ ಅಂಗಡಿಯವನನ್ನು ಸೇರಿ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ನೋದ ಹೊರವಲಯದಲ್ಲಿರುವ ಕಾಕೋರಿಯ ರಸ್ತೆಬದಿಯಲ್ಲಿ ಉಪಾಹಾರ ಗೃಹವಿತ್ತು. ಆ ಅಂಗಡಿಯವನು ರೊಟ್ಟಿಯನ್ನು ತಯಾರಿಸಲು ಹಿಟ್ಟಿನ ಮೇಲೆ ಉಗುಳುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ 22 ಸೆಕೆಂಡಿನ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಪರಿಣಾಮ ಅಂಗಡಿಯವನನ್ನು ಸೇರಿ ಐದು ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘನೆ – ಪ್ರಭು ಚವ್ಹಾಣ್ ವಿರುದ್ಧ ದೂರು

ಈ ಕುರಿತು ಪ್ರತಿಕ್ರಿಯಿಸಿದ ಕಕೋರಿ ಸಹಾಯಕ ಪೊಲೀಸ್ ಕಮಿಷನರ್ ಅಶುತೋಷ್ ಕುಮಾರ್, ಧಾಬಾ ಮಾಲೀಕ ಯಾಕೂಬ್ ಮತ್ತು ಡ್ಯಾನಿಶ್, ಹಫೀಜ್, ಮುಖ್ತಾರ್, ಫಿರೋಜ್ ಮತ್ತು ಅನ್ವರ್‍ರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳ ವಿರುದ್ಧ ರೋಗ ಹರಡಿಸುವ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ ಸಮಯದಲ್ಲಿ ಈ ರೀತಿಯ ಕೃತ್ಯ ಮಾಡಿದರುವುದು ದೊಡ್ಡ ಅಪರಾಧವಾಗಿದೆ. ಈ ರೀತಿ ರೊಟ್ಟಿ ಮಾಡುವುದರಿಂದ ಸೋಂಕು ಹೆಚ್ಚುತ್ತೆ. ಇವರ ನಿರ್ಲಕ್ಷ್ಯ ಸೋಂಕು ಹರಡಲು ದಾರಿಯಾಗುತ್ತೆ. ಇವರು ಸೋಂಕನ್ನು ಹರಡಲು ಮಾರಣಾಂತಿಕ ಕೃತ್ಯ ಎಸಗಿದ್ದಾರೆ ಎಂದರು. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

POLICE JEEP

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಸುಶೀಲ್ ರಜಪೂತ್ ಅಪ್ಲೋಡ್ ಮಾಡಿದ್ದಾನೆ. ವೀಡಿಯೋವನ್ನು ದೂರದಿಂದ ಚಿತ್ರೀಕರಿಸಲಾಗಿದೆ. ಅಡುಗೆಯವರು ನಿಜವಾಗಿಯೂ ಉಗುಳಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಅದಕ್ಕೆ ನಾವು ಈ ಆರೋಪವನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ನೆರವು ಪಡೆಯುತ್ತೇವೆ ಎಂದು ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *