ಮೂಡ್‌ ಸರಿಯಾಗಿಲ್ವಾ.. ಖಿನ್ನತೆ ಹೋಗಲಾಡಿಸಲು ಆಹಾರದಲ್ಲೂ ಇದೆ ಮದ್ದು

Public TV
2 Min Read

ನುಷ್ಯ ಯಾವಾಗಲೂ ಖುಷಿಯಾಗಿರಲು ಸಾಧ್ಯವಿಲ್ಲ. ಪರಿಸ್ಥಿತಿಗಳು ಒಮ್ಮೊಮ್ಮೆ ಮನಸ್ಸಿಗೆ ಖಿನ್ನತೆಯನ್ನುಂಟು ಮಾಡುವುದು ಸಹಜ. ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ, ಅಂದುಕೊಂಡಿದ್ದು ಆಗದೇ ಇದ್ದಾಗ ಮಾನಸಿಕವಾಗಿ ಕುಗ್ಗುತ್ತೇವೆ. ನಮ್ಮ ಮೂಡ್‌ ಸರಿಯಾಗಿಲ್ಲ ಎಂದರೆ, ಯಾವ ಕೆಲಸ ಕಾರ್ಯದಲ್ಲೂ ಆಸಕ್ತಿ ಇರುವುದಿಲ್ಲ. ಮಾನಸಿಕ ಖಿನ್ನತೆಯು ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಖಿನ್ನತೆಯ ಸಂದರ್ಭದಲ್ಲಿ ಮನಸ್ಸನ್ನು ಸಹಜ ಸ್ಥಿತಿಗೆ ತಂದು ಉಲ್ಲಾಸಭರಿತವಾಗಿರಲು ಕೆಲವು ದೈಹಿಕ ಚಟುವಟಿಕೆಗಳು ಇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಾನಸಿಕ ಖಿನ್ನತೆಯಿಂದ ಹೊರಬರಲು ಆಹಾರ ಕ್ರಮವೂ ಸಹಕಾರಿಯಾಗುತ್ತೆ ಎಂಬುದು ಎಷ್ಟೋ ಮಂದಿಗೆ ಗೊತ್ತೇ ಇರಲ್ಲ. ನೀವು ಖುಷಿಯಾಗಿರಬೇಕೆ? ನಿತ್ಯ ಒಳ್ಳೆ ಮೂಡ್‌ನಲ್ಲಿರಬೇಕೆ? ಹಾಗಾದರೆ ಈ ಆಹಾರ ಕ್ರಮವನ್ನು ರೂಢಿಸಿಕೊಳ್ಳಿ. ಇದನ್ನೂ ಓದಿ: ಹೊಟ್ಟೆನೋವಿಗೆ ಈ ಮನೆ ಮದ್ದು ರಾಮಬಾಣ

ವಾಲ್‌ನಟ್‌ (Walnuts)
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ದೇಹಕ್ಕೆ ಪೋಷಕಾಂಶಗಳು ಅಗತ್ಯ.‌ ಅದಕ್ಕಾಗಿ ವಾಲ್‌ನಟ್ ಸೇವನೆ ತುಂಬಾ ಸಹಕಾರಿ. ಒಮೆಗಾ -3 ಕೊಬ್ಬಿನಾಮ್ಲವನ್ನು ಇದು ಒಳಗೊಂಡಿದೆ. ಬ್ರಿಟಿಷ್ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ ಅಧ್ಯಯನವು ಇದನ್ನು ಉಲ್ಲೇಖಿಸಿದೆ. ಮಾನಸಿಕ ಅಸ್ವಸ್ಥತೆಯನ್ನು ನಿಯಂತ್ರಿಸಲು ವಾಲ್‌ನಟ್‌ ಸೇವನೆ ಉತ್ತಮ.

​ಚಿಯಾ ಬೀಜಗಳು (Chia Seeds)
ಮಾನಸಿಕ ಆರೋಗ್ಯವನ್ನು ಸುಧಾರಿಸಲು, ನೀವು ಚಿಯಾ ಬೀಜಗಳನ್ನು ಸೇವಿಸಬೇಕು. ಇದು ಒಮೆಗಾ-3 ಕೊಬ್ಬಿನಾಮ್ಲಗಳು, ಅಮೈನೋ ಆಮ್ಲಗಳು, ಕಬ್ಬಿಣ ಮತ್ತು ವಿಟಮಿನ್ ಬಿ ನಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಮೆದುಳಿನಲ್ಲಿ ರಾಸಾಯನಿಕಗಳ ಉತ್ಪಾದನೆಯನ್ನು ಸರಿಯಾಗಿ ಮಾಡುತ್ತದೆ. ಇದರಿಂದಾಗಿ ಮನಸ್ಥಿತಿಯು ಉತ್ತಮವಾಗುತ್ತದೆ.

​ಡಾರ್ಕ್‌ ಚಾಕೊಲೇಟ್‌ (Dark Chocolate)
ಈಗಿನ ಕಾಲದಲ್ಲಿ ಚಾಕೊಲೇಟ್‌ ಯಾರಿಗೆ ಇಷ್ಟವಿಲ್ಲ ಹೇಳಿ? ಮನಸ್ಸನ್ನು ರಿಫ್ರೆಶ್‌ ಮಾಡಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಚಾಕೊಲೇಟ್‌ ತಿನ್ನಿ ಎಂದು ಮನೋವೈದ್ಯರು ಶಿಫಾರಸು ಮಾಡುತ್ತಾರೆ. ಮಧುಮೇಹ ಇಲ್ಲದವರು ಮಾನಸಿಕ ಖಿನ್ನತೆಯಿಂದ ದೂರ ಉಳಿಯಲು ಡಾರ್ಕ್‌ ಚಾಕೊಲೇಟ್‌ ಸೇವಿಸಬಹುದು. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

ಅಣಬೆ (Mushrooms)
ಅಣಬೆಗಳು ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎಂಬುದಕ್ಕೆ ಎರಡು ಉತ್ತಮ ಕಾರಣಗಳು ಇವೆ. ಒಂದು, ಅಣಬೆಯಲ್ಲಿರುವ ಪೋಷಕಾಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸಬಹುದು.

​ಸಿಹಿ ಗೆಣಸು (Sweet Potato)
ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳಿಂದ ತುಂಬಿದೆ. ಒತ್ತಡವನ್ನು ನಿವಾರಿಸಲು ನೀವು ಸಿಹಿ ಗೆಣಸು ತಿನ್ನಬಹುದು. ಸಿಹಿ ಗೆಣಸು ಖಿನ್ನತೆಯನ್ನು ತಡೆಯುವುದಲ್ಲದೆ, ಆತಂಕವನ್ನು ಹೋಗಲಾಡಿಸುವ ಪೋಷಕಾಂಶಗಳನ್ನು ಹೊಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *