ಸುಲಭವಾಗಿ ಮಾಡಿ ವಿಭಿನ್ನವಾದ Potato Triangles..!

Public TV
1 Min Read

ಸಾಮಾನ್ಯವಾಗಿ ಯಾವುದೇ ಅಡುಗೆ ತಯಾರಿಸುವಾಗಲೂ ಹೆಚ್ಚಿನವರು ವಿಭಿನ್ನ ಹಾಗೂ ಸುಲಭವಾಗಿ ರೆಡಿಯಾಗುವ ಆಹಾರಗಳ ಬಗ್ಗೆ ಯೋಚಿಸುತ್ತಾರೆ. ಅದರ ಜೊತೆಗೆ ಆರೋಗ್ಯಕರವಾಗಿಯೂ ಹಾಗೂ ಮನೆಯಲ್ಲಿಯೇ ತಯಾರಿಸಲು ಸಾಧ್ಯವಾಗುವಂತಹ ತಿನಿಸುಗಳಾದರೆ ಉತ್ತಮ. ಹೌದು, ಮನೆಯಲ್ಲಿಯೇ ಸುಲಭವಾಗಿ, ಕಡಿಮೆ ಸಮಯದಲ್ಲಿಯೇ Potato Triangles ಮಾಡಬಹುದು.

ಬೇಕಾಗುವ ಪದಾರ್ಥಗಳು:
ಆಲುಗಡ್ಡೆ
ಬ್ರೇಡ್
ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುರಿ
ಮೆಣಸಿನಕಾಯಿ
ಕರಿಮೆಣಸಿನ ಪುಡಿ
ಎಣ್ಣೆ

ಮಾಡುವ ವಿಧಾನ:
ಮೊದಲು ಆಲುಗಡ್ಡೆಯನ್ನು ಬೇಯಿಸಿಕೊಳ್ಳಿ, ಬಳಿಕ ಬೇಯಿಸಿದ ಆಲುಗಡ್ಡೆ ತಣ್ಣಗಾದ ನಂತರ ಅದನ್ನು ಚೆನ್ನಾಗಿ ಸ್ಮ್ಯಾಶ್‌ (ಹಿಸುಕಿ) ಮಾಡಿಕೊಳ್ಳಿ. ನಂತರ ಒಂದು ಬೌಲ್‌ಗೆ ನೀರು ಹಾಕಿಕೊಂಡು ಅದಕ್ಕೆ ಬ್ರೆಡ್‌ನ್ನು ಅದ್ದಿ. ಮೆತ್ತಗಾದ ಬ್ರೆಡ್‌ನ್ನು ಸ್ಮ್ಯಾಶ್‌ ಮಾಡಿದ ಆಲುಗಡ್ಡೆ ಸೇರಿಸಿ, ಅದಕ್ಕೆ ಉಪ್ಪು, ಖಾರದ ಪುಡಿ ಅಥವಾ ಮೆಣಸಿನಕಾಯಿ, ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

ಕಲಸಿಕೊಂಡ ಮಿಶ್ರಣವನ್ನು ಚಪಾತಿ ರೀತಿಯಲ್ಲಿ ಮಾಡಬೇಕು. ಬಳಿಕ ಅದರಲ್ಲಿ ತ್ರಿಭುಜ ಆಕಾರಕ್ಕೆ ಬರುವಂತೆ ಕಟ್ ಮಾಡಿಕೊಂಡರೆ ಸಾಕು, Potato Triangles ರೆಡಿಯಾಗುತ್ತದೆ. ಇದನ್ನು ನೀವು ಸಾಸ್ ಜೊತೆಗೆ ತಿನ್ನಬಹುದು.

Share This Article