ವಿಜಯಪುರದಲ್ಲೂ ಕಂಪಿಸಿದ ಭೂಮಿ – ಓಡೋಡಿ ಮನೆಯಿಂದ ಹೊರ ಬಂದ ಜನತೆ

Public TV
1 Min Read

ವಿಜಯಪುರ: ಕೊಡಗು ಬಳಿಕ ವಿಜಯಪುರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗ್ಗೆ ಎರಡು ಬಾರಿ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದೆ.

ವಿಜಯಪುರದ ನಗರ, ಚಡಚಣ, ತಿಕೋಟ, ಬಸವನಬಾಗೇವಾಡಿ ತಾಲೂಕಿನಾದ್ಯಂತ ಭೂಕಂಪ ಅನುಭವವಾಗಿದ್ದು, ಇಲ್ಲಿಯವರೆಗೆ ಇಷ್ಟು ಸದ್ದು ಆಗಿರಲಿಲ್ಲ ಎಂದು ಜನರು ಹೇಳಿದ್ದಾರೆ.

6:22 ಹಾಗೂ 6:24 ಕ್ಕೆ‌ ಎರಡು ಬಾರಿ ಭೂಮಿ ಕಂಪಿಸಿದೆ. 6:22 ನಿಮಿಷಕ್ಕೆ 4.9 ತೀವ್ರತೆ, 6:24ಕ್ಕೆ 4.6 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದನ್ನೂ ಓದಿ: ಕೋರ್ಟ್ ನಲ್ಲಿ ಸಾಯಿಪಲ್ಲವಿಗೆ ಹಿನ್ನೆಡೆ: ವಿಚಾರಣೆಗೆ ಹಾಜರಾಗುವಂತೆ ಸೂಚನೆ

ವಿಜಯಪುರ, ಇಂಡಿ, ಸೊಲ್ಲಾಪುರ, ಜಮಖಂಡಿ, ಬಾಗಲಕೋಟೆ, ಮುಂಬೈ, ಪುಣೆ ಭಾಗಗಳಲ್ಲಿ ಭೂಕಂಪನ ಅನುಭವವಾಗಿದೆ. ಭೂಕಂಪನದಿಂದ ವಿದ್ಯುತ್ ತಂತಿಗಳು ಅಲುಗಾಡಿದ್ದು, ಮನೆಗಳಲ್ಲಿದ್ದ ಜನ ಓಡೋಡಿ ಹೊರ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *