ರವಿತೇಜ ಹೊಸ ಸಿನಿಮಾಗೆ ‘ಈಗಲ್’ ಟೈಟಲ್ ಫಿಕ್ಸ್

Public TV
1 Min Read

ತೆಲುಗಿನ ಮಾಸ್ ಮಹಾರಾಜ ರವಿತೇಜ (Raviteja)  ನಟನೆಯ,‌ ಪೀಪಲ್ ಮೀಡಿಯಾ ಫ್ಯಾಕ್ಟರಿ ನಡಿ ಟಿಜೆ ವಿಶ್ವ ಪ್ರಸಾದ್‌ ‌ನಿರ್ಮಾಣದ ಧಮಾಕ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ರವಿತೇಜ ಸಿನಿಕರಿಯರ್ ನ‌ ಬಿಗೆಸ್ಟ್ ಹಿಟ್ ಎನಿಸಿಕೊಂಡಿತ್ತು. ಧಮಾಕ ಸಕ್ಸಸ್ ಬೆನ್ನಲ್ಲೇ ಮಾಸ್ ಮಹಾರಾಜ ಮತ್ತೊಮ್ಮೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಜೊತೆ ಕೈ ಜೋಡಿಸಿದ್ದಾರೆ.

ಛಾಯಾಗ್ರಹಕರಾಗಿದ್ದ ಕಾರ್ತಿಕ್ ಕಟ್ಟಿಮನೆ (Karthik Kattimane) ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿರುವ ಸಿನಿಮಾಗೆ ‘ಈಗಲ್’ (Eagle) ಎಂಬ ಕ್ಯಾಚಿ ಟೈಟಲ್ (Title) ಇಡಲಾಗಿದೆ. ಸಣ್ಣ ಗ್ಲಿಂಪ್ಸ್ ಮೂಲಕ ಈಗಲ್ ಲೋಕವನ್ನು ಪರಿಚಯ ಮಾಡಿಕೊಡಲಾಗಿದೆ. ರವಿತೇಜ ಮೋಸ್ಟ್ ವಾಂಟೆಡ್‌ ಪೇಂಟರ್ ಆಗಿ, ಹತ್ತಿ ಕೃಷಿನಾಗಿ, ನಾನಾ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾಗಶಃ ಮಾತ್ರ ಅವರ ಮುಖವನ್ನು ಚಿತ್ರತಂಡ ತೋರಿಸಿ ಸಸ್ಪೆನ್ಸ್ ಕಾಯ್ದುಕೊಂಡಿದೆ.

ಅನುಪಮಾ ಪರಮೇಶ್ವರನ್ (Anupama Parameswaran), ನವದೀಪ್, ಮಧುಬಾಲ, ಕಾವ್ಯ ಥಾಪರ್ ಟೈಟಲ್ ಝಲಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.  ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈಗಲ್ ಸಿನಿಮಾಗೆ ಕಾರ್ತಿಕ್ ಗಟ್ಟಿಮನ್ನಿ ನಿರ್ದೇಶನದ ಜೊತೆಗೆ ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ‌. ಮಣಿಬಾಬು ಕರಣಂ ಸಂಭಾಷಣೆ, ದಾವ್ಜಂಡ್ ಟ್ಯೂನ್ ಚಿತ್ರಕ್ಕಿದೆ. ಹೈದ್ರಾಬಾದ್ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, 2024ರ ಸಂಕ್ರಾಂತಿ ಹಬ್ಬ ಸಿನಿಮಾ ತೆರೆಗೆ ಬರಲಿದೆ.

Share This Article