ಮೋದಿಗೆ ಸಿಕ್ಕ ಗಿಫ್ಟ್‌ಗಳಿಗೆ ಭರ್ಜರಿ ಬೆಲೆ- ಚೋಪ್ರಾ ಜಾವೆಲಿನ್‍ಗೆ 1.50 ಕೋಟಿ

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆಗಳ ಇ-ಹರಾಜಿನಲ್ಲಿ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೋಲ್ಡ್ ಮೆಡಲ್ ವಿನ್ನರ್ ನೀರಜ್ ಚೋಪ್ರಾ ಅವರ ಜಾವೆಲಿನ್ ಅತ್ಯಂತ ಅಧಿಕ ಬೆಲೆಗೆ ಮಾರಾಟಗೊಂಡಿದೆ.

ಇ-ಹರಾಜು ಗುರುವಾರ ಮುಕ್ತಾಯಗೊಂಡಿದೆ. ಒಲಿಂಪಿಕ್ಸ್‌ನಲ್ಲಿ ನೀರಜ್ ಬಳಸಿದ್ದ ಜಾವೆಲಿನ್ ಬರೋಬ್ಬರಿ ಒಂದೂವರೆ ಕೋಟಿ ಮತ್ತು ಭವಾನಿ ದೇವಿ ಅವರ ಆಟೋಗ್ರಾಫ್‍ವುಳ್ಳ ಫೆನ್ಸಿಂಗ್ ಕತ್ತಿ ಒಂದು ಕಾಲು ಕೋಟಿಗೆ ಹರಾಜುಗೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಗಣ್ಯರು ನೀಡಿರುವ ಕಾಣಿಕೆಗಳನ್ನು ಇ-ಹರಾಜಿ (e-auction)ನಲ್ಲಿ ಇರಿಸಲಾಗಿತ್ತು. ಇದನ್ನೂ ಓದಿ: ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ನೀರಜ್ ಚೋಪ್ರಾ ತಮ್ಮ ಜಾವೆಲಿನನ್ನು ಮೋದಿ ಅವರಿಗೆ ಕಾಣಿಕೆಯಾಗಿ ನೀಡಿದ್ದರು. ಇದೇ ವೇಳೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಮೊದಲ ಬಾರಿಗೆ ಫೆನ್ಸಿಂಗ್‌ನಲ್ಲಿ ಭಾರತ ಪ್ರತಿನಿಧಿಸಿದ್ದ ಭವಾನಿ ದೇವಿ ಸೇರಿದಂತೆ ಹಲವು ಕ್ರೀಡಾಪಟುಗಳು ಪ್ರಧಾನಿಗಳನ್ನು ಭೇಟಿಯಾಗಿದ್ದರು. ಎಲ್ಲರೂ ಪ್ರಧಾನಿಗಳಿಗೆ ವಿಶೇಷ ಉಡುಗೊರೆಗಳನ್ನು ನೀಡಿದ್ದರು. ನೀರಜ್ ಚೋಪ್ರಾ ಅವರ ಭರ್ಜಿಗೆ ಆನ್‍ಲೈನ್‍ನಲ್ಲಿ ಮೂಲ ಬೆಲೆಯಾಗಿ 80 ಸಾವಿರ ರೂ. ನಿಗದಿ ಮಾಡಲಾಗಿತ್ತು. ಭರ್ಜಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಕೊನೆಗೆ 1.50 ಕೋಟಿಗೆ ಬಿಕರಿಯಾಗಿದೆ. ಭವಾನಿಯವರ ಫೆನ್ಸಿಂಗ್ ಸಹ 1.25 ಕೋಟಿಗೆ ಬಿಕರಿಗೊಂಡಿದೆ.  ಇದನ್ನೂ ಓದಿ:   ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ- ಸ್ಮರಣಿಕೆಗಳು ಸೆ.17ರಿಂದ ಇ-ಹರಾಜು

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು ಅವರ racket ಬೆಲೆ 80 ಲಕ್ಷ ರೂ. ಅಂತಿಮಗೊಂಡಿತು. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಆಟಗಾರರ ಸಹಿಯುಳ್ಳ ಡ್ರೆಸ್ 1 ಕೋಟಿ ರೂಪಾಯಿಗೆ ಹರಾಜುಗೊಂಡಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಜಾವೆಲಿನ್ ವಿಭಾಗದಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್ ಅವರ ಭರ್ಜಿ ಸಹ 1.002 ಕೋಟಿ ರೂ. ಮತ್ತು ಬಾಕ್ಸಿಂಗ್‍ನಲ್ಲಿ ಕಂಚು ಗೆದ್ದ ಲವ್ಲೀನಾ ಅವರ ಗ್ಲೌಸ್ 91 ಲಕ್ಷ ರೂ.ಗೆ ಮಾರಾಟಗೊಂಡಿದೆ. ಇದನ್ನೂ ಓದಿ:  ಶತಕೋಟಿ ಭಾರತೀಯರ ಕನಸು ನನಸು – ಚಿನ್ನ ಗೆದ್ದ ನೀರಜ್

ಮಿನಿಸ್ಟರಿ ಆಫ್ ಕಲ್ಚರ್ ಪ್ರಧಾನಿಗಳಿಗೆ ಸಿಕ್ಕಂತಹ ಎಲ್ಲ ಕಾಣಿಕೆಗಳನ್ನು ಆನ್‍ಲೈನ್‍ನಲ್ಲಿ ಹರಾಜಿಗೆ ಇಟ್ಟಿತ್ತು. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7ರವವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ 1,300 ವಸ್ತುಗಳನ್ನು ಇರಿಸಲಾಗಿತ್ತು. ಇಲ್ಲಿ ಬಂದಂತಹ ಎಲ್ಲ ಹಣವನ್ನು ‘ನಮಾಮಿ ಗಂಗಾ’ ಯೋಜನೆಗೆ ವಿನಿಯೋಗಿಸಲಾಗುತ್ತದೆ. ಇದಕ್ಕೂ ಮೊದಲು 2019ರಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸಹ ತನ್ನಲ್ಲಿರುವ ಹಲವು ವಸ್ತುಗಳನ್ನು ಆನ್‍ಲೈನ್ ಹರಾಜಿನಲ್ಲಿರಿಸಿತ್ತು. ಹರಾಜಿನಲ್ಲಿ ಬಂದ ಹಣವನ್ನು (ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್) ಗಂಗಾ ನದಿ ಪುನರುಜ್ಜೀವನ ಯೋಜನೆಯಾಗಿರುವ ನಮಾಮಿ ಗಂಗೆ ಮಿಷನ್‍ಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *