ಬಾಗಲಕೋಟೆ: ಪೊಲೀಸ್ ವಾಹನ ಮತ್ತು ಬೊಲೆರೋ ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಡಿವೈಎಸ್‍ಪಿ, ಇನ್ಸ್ ಪೆಕ್ಟರ್ ಮತ್ತು ಓರ್ವ ಹೋಂಗಾರ್ಡ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಡಿವೈಎಸ್‍ಪಿ ಮರಿಲಿಂಗೇಗೌಡಿ(ಬಾಳೇಗೌಡ), ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎಚ್. ಶಿವಸ್ವಾಮಿ ಹಾಗೂ ಪೊಲೀಸ್ ವಾಹನ ಡ್ರೈವ್ ಮಾಡುತ್ತಿದ್ದ ಹೋಂಗಾರ್ಡ್ ವೇಣುಗೋಪಾಲ್ ಮೃತ ದುರ್ದೈವಿಗಳು. ಈ ಘಟನೆ ಬಾಗಲಕೋಟೆ ತಾಲೂಕಿನ ಮಲ್ಲಾಪುರ ಕ್ರಾಸ್ ಬಳಿ ಸಂಭವಿಸಿದೆ.
ಚುನಾವಣಾ ಕೆಲಸದ ನಿಮಿತ್ತ ಬಾಗಲಕೋಟೆಗೆ ಬರುವಾಗ ಮಲ್ಲಾಪುರ ಕ್ರಾಸ್ ಬಳಿ ಪೊಲೀಸ್ ವಾಹನ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಇಬ್ಬರು ಡಿವೈಎಸ್‍ಪಿ, ಓರ್ವ ಹೋಂಗಾರ್ಡ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸದ್ಯಕ್ಕೆ ಮೂವರ ಮೃತದೇಹವನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.