ಪುನೀತ್ ಅವರ ದ್ವಿತ್ವ ಸಿನಿಮಾದ ಮೇಲೆ ಹಲವರ ಕಣ್ಣು

Public TV
2 Min Read

ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಪುನೀತ್ ರಾಜ್ ಕುಮಾರ್ ‘ದ್ವಿತ್ವ’ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಬೇಕಿತ್ತು. ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದರು, ಫಸ್ಟ್ ಲುಕ್ ಬಿಡುಗಡೆ ಕೂಡ ಆಗಿತ್ತು. ಸ್ಕ್ರಿಪ್ಟ್ ವರ್ಕ್ ಬಹುತೇಕ ಮುಗಿದಿತ್ತು. ಪುನೀತ್ ನಿಧನಕ್ಕೂ ಎರಡು ದಿನ ಮುಂಚೆ ಕಾಸ್ಟ್ಯೂಮ್ ಬಗ್ಗೆ ನಿರ್ದೇಶಕ ಲೂಸಿಯಾ ಪವನ್ ಕುಮಾರ್ ಜತೆ ಮಾತೂ ಕೂಡ ಆಡಿದ್ದರು. ವಿಧಿಯಾಟಕ್ಕೆ ಪುನೀತ್ ಬಲಿಯಾದರು. ಇದನ್ನೂ ಓದಿ : ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

ಪುನೀತ್ ರಾಜ್ ಕುಮಾರ್ ನಿಧನಕ್ಕೂ ಮುನ್ನ ಐದು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಮೊದಲು ದ್ವಿತ್ವ ಆಗಬೇಕಿತ್ತು. ನಂತರ ತಮ್ಮದೇ ಬ್ಯಾನರ್ ನ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಈ ಚಿತ್ರಕ್ಕೆ ಜೇಕಬ್ ವರ್ಗಿಸ್ ನಿರ್ದೇಶಕರು. ಸ್ವತಃ ಪುನೀತ್ ಅವರೇ ಈ ಚಿತ್ರದ ಕಥೆಯಲ್ಲಿ ಭಾಗಿಯಾಗಿದ್ದರು. ನಂತರ ಮಾಡಬೇಕಾಗಿದ್ದ ಚಿತ್ರ ಸಿನಿಮಾಟೋಗ್ರಾಫರ್ ಕಂ ನಿರ್ದೇಶಕ ಕೃಷ್ಣ ಅವರ ಜತೆಗಿನ ಸಿನಿಮಾ. ಇವುಗಳ ಹೊರತಾಗಿಯೂ ದಿನಕರ್ ತೂಗುದೀಪ್, ಸಂತೋಷ್ ಆನಂದ್ ರಾಮ್ ಜತೆಯೂ ಅವರು ಒಂದೊಂದು ಸಿನಿಮಾ ಮಾಡಬೇಕಿತ್ತು. ಇವೆಲ್ಲವನ್ನೂ ಬದಿಗೆ ಸರಿಸಿ ಅಪ್ಪು ಹೊರಟೇ ಬಿಟ್ಟರು. ಇದನ್ನೂ ಓದಿ : ಸ್ಮಾರಕವಾಗಲಿದೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮನೆ

ಪುನೀತ್ ರಾಜ್ ಕುಮಾರ್ ಇಲ್ಲದೇ ನನ್ನ ಕಥೆಯನ್ನು ಸಿನಿಮಾ ಮಾಡಲಾರೆ ಎಂದು ನಿರ್ದೇಶಕ ಜೇಕಬ್ ಘೋಷಿಸಿಯಾಗಿದೆ. ಉಳಿದವರು ಇನ್ನೂ ಕಥೆ ಹೆಣೆಯುವುದರಲ್ಲಿ ಇದ್ದರು. ಆದರೆ, ಇನ್ನೇನು ಶುರುವಾಗಬೇಕಿದ್ದ ‘ದ್ವಿತ್ವ’ ಸಿನಿಮಾ ಏನಾಗುತ್ತದೆ ಎನ್ನುವ ಚರ್ಚೆ ಗಾಂಧಿನಗರದಲ್ಲಿ ಶುರುವಾಗಬೇಕಿತ್ತು. ಅದಕ್ಕೀಗ ಉತ್ತರ ಸಿಗುವ ಕಾಲ ಬಂದಿದೆ. ಇದೇ ಸಿನಿಮಾವನ್ನು ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆ ಕೂಡ ಆಗಿದೆ. ಜತೆಗೆ ಸ್ಟಾರ್ ನಟರಿಗೂ ಈ ಕಥೆಯ ಮೇಲೆ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಬಡ್ಡೀಸ್ ಚಿತ್ರಕ್ಕೆ ಯುಎಸ್ಎ ಕ್ಯಾಮೆರಾವುಮೆನ್ : ಇವರು ಎಮ್ಮಿ ಅವಾರ್ಡ್ ನಾಮಿನೇಟರ್

ಯಾವುದೇ ಕಾರಣಕ್ಕೂ ಈ ಸಿನಿಮಾ ನಿಲ್ಲುವುದಿಲ್ಲ. ಸಮರ್ಥ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಚಿತ್ರವನ್ನು ಮುಂದುವರೆಸುತ್ತೇವೆ. ಪುನೀತ್ ಅವರ ನೆನಪಿನಲ್ಲಿಯೇ ಈ ಸಿನಿಮಾ ಮಾಡುತ್ತೇವೆ ಎನ್ನುವ ಮೂಲಕ ಚಿತ್ರ ಆಗುವ ಕುರಿತು ಮುನ್ಸೂಚನೆ ನೀಡಿದೆ ಚಿತ್ರತಂಡ.

Share This Article
Leave a Comment

Leave a Reply

Your email address will not be published. Required fields are marked *