ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ -‌ NIAಗೆ ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಳ್ಳೋಕೆ ಅವಕಾಶ ಇದೆ: ಡಿವಿಎಸ್‌

Public TV
1 Min Read

– ಧರ್ಮಸ್ಥಳ ವಿರುದ್ಧದ ಪಿತೂರಿಯಲ್ಲಿ ಎಡಪಂಥೀಯರ ಕೈವಾಡ ಇದೆ ಅಂತ ಆರೋಪ

ಬೆಂಗಳೂರು: ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರ ಪ್ರಕರಣವನ್ನು (Dharmasthala Case) ಎನ್ಐಎ ಸೂಮೋಟೋ‌ ಕೇಸ್ ದಾಖಲಿಸಿಕೊಂಡು ತ‌ನಿಖೆ ನಡೆಸಲು ಅವಕಾಶ ಇದೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದ ಗೌಡ (DV Sadananda Gowda) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತಾಡಿದ ಸದಾನಂದ ಗೌಡ್ರು, ಧರ್ಮಸ್ಥಳ ವಿರುದ್ಧ ಭವಿಷ್ಯದಲ್ಲಿ ಇಂಥ ಅಪಪ್ರಚಾರ, ಪಿತೂರಿಗಳಿಗೆ ಫುಲ್ ಸ್ಟಾಪ್ ಹಾಕುವ ಅಗತ್ಯ ಇದೆ. ಇದು ಎಸ್ಐಟಿಯಿಂದ ಸಾಧ್ಯವಿಲ್ಲ, ಎನ್ಐಎ ತನಿಖೆ (NIA Investigation) ನಡೆದರೆ ಮಾತ್ರ ಸಾಧ್ಯ.‌ ಎನ್ಐಎಗೆ ಸೂಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇದೆ. ಎನ್ಐಎ ಸೂಮೋಟೋ ದಾಖಲಿಸಿಕೊಂಡು ಈ ಪ್ರಕರಣದ ತನಿಖೆ ಮಾಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

ಧರ್ಮಸ್ಥಳ ವಿರುದ್ಧದ ಪಿತೂರಿಯಲ್ಲಿ ಎಡಪಂಥೀಯರ ಕೈವಾಡ ಇದೆ ಅನ್ನೋ ಅನುಮಾನಗಳಿವೆ. ಎಡಪಂಥೀಯರು ಈಗ ಸ್ವಲ್ಪ ಮಟ್ಟಿಗೆ ಇರುವುದು ಕೇರಳದಲ್ಲಿ ಹಾಗಾಗಿ ಎನ್ಐಎ ಇದನ್ನು ತೆಗೆದುಕೊಳ್ಳಲು ಸೂಕ್ತ ಕಾರಣ ಇದೆ ಎಂದು ಡಿವಿಎಸ್ ಹೇಳಿದ್ರು.

ಧರ್ಮಸ್ಥಳ ವಿರುದ್ಧ ಸುದೀರ್ಘ ಅವಧಿಯಿಂದ ಷಡ್ಯಂತ್ರ ನಡೆದಿದೆ. ಹೊಸ ಹೊಸ ಪಾತ್ರಧಾರಿಗಳು ಬಂದಿದ್ದಾರೆ. ಎಡಪಂಥೀಯರ ಹೆಗಲ ಮೇಲೆ ಕೋವಿ ಇಟ್ಟು ಗುಂಡು ಹಾರಿಸುವ ಕೆಲಸಗಳೂ ನಡೀತಿವೆ. ಇದೆಲ್ಲ ಸಮಗ್ರವಾಗಿ ತನಿಖೆ ನಡೆಸಬೇಕಾಗುತ್ತದೆ. ಹೀಗಾಗಿ ಈ ಪ್ರಕರಣ ಎನ್ಐಎಗೆ ಕೊಡಬೇಕು ಅನ್ನೋದು ನಮ್ಮ ಒತ್ತಾಯ ಅಂತ ಇದೇವೇಳೆ ಡಿವಿಎಸ್ ತಿಳಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ಪಕ್ಷದ ‘ಮತಗಳ್ಳತನ’ ಬಯಲು ಮಾಡಿದ ಸಿದ್ದರಾಮಯ್ಯ; ರಾಜಣ್ಣನಂತೆ ವಜಾ ಮಾಡ್ತೀರಾ – ರಾಗಾಗೆ ಅಶೋಕ್ ಸವಾಲ್

Share This Article