Exclusive: ‘ಭೀಮ’ ಚಿತ್ರೀಕರಣದ ವೇಳೆ ದುನಿಯಾ ವಿಜಯ್ ಕಾಲಿಗೆ ಪೆಟ್ಟು

Public TV
2 Min Read

ಟ ಕಮ್ ನಿರ್ದೇಶಕ ದುನಿಯಾ ವಿಜಯ್ ‘ಸಲಗ’ (Salaga) ಸೂಪರ್ ಸಕ್ಸಸ್ ನಂತರ ‘ಭೀಮ’ (Bheema) ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ದುನಿಯಾವಿಜಯ್ ಕಾಲಿಗೆ ಪೆಟ್ಟು ಬಿದ್ದಿದೆ. ಗಾಯದ ನೋವಿನ ನಡುವೆಯೇ ವಿಜಯ್ ‘ಭೀಮ’ ಚಿತ್ರದ ಶೂಟಿಂಗ್ ಮುಂದುವರೆಸಿದ್ದಾರೆ. ಈ ಘಟನೆ ಬಗ್ಗೆ ನಿರ್ಮಾಪಕ ಕೃಷ್ಣ ಸಾರ್ಥಕ್ (Krishna Sarthak) ಪಬ್ಲಿಕ್ ಟಿವಿ ಡಿಜಿಟಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ನಡುವೆ ಕ್ರಿಕೆಟ್ ವೀಕ್ಷಿಸಿದ ಧನುಷ್, ಶಿವಣ್ಣ

ಕನ್ನಡ ಸಿನಿಮಾ ರಂಗದ ಪ್ರತಿಭಾನ್ವಿತ ನಟ ದುನಿಯಾ ವಿಜಯ್ (Duniya Vijay) ಅವರು ನಿರ್ದೇಶಕನಾಗಿಯೂ ಸಕ್ಸಸ್ ಕಂಡವರು. ಮೊದಲ ಚಿತ್ರ ಸಲಗ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಆಗಿಯೂ ಸಕ್ಸಸ್ ಕಂಡರು. ಈಗ ಭೀಮ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಅವರು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

‘ಭೀಮ’ (Bheema) ಚಿತ್ರದ ಚಿತ್ರೀಕರಣ (Shooting) ಬಹುಬಿರುಸಿನಿಂದ ಸಾಗುತ್ತಿತ್ತು. ಚೇತನ್ ಡಿಸೋಜ ಅವರ ನಿರ್ದೇಶನದಲ್ಲಿ ಆಕ್ಷನ್ ದೃಶ್ಯಗಳು ನಡೆಯುತ್ತಿದ್ದವು. ಆದರೆ ಇದೆ ಬುಧವಾರ (ಏಪ್ರಿಲ್ 12) ಆಕ್ಷನ್ ದೃಶ್ಯವೊಂದರಲ್ಲಿ ಅಭಿನಯಿಸುವಾಗ ವಿಜಿ ಅವರ ಬಲಗಾಲಿಗೆ ಏಟು ಬೀಳುತ್ತದೆ. ಕಾಲಿಗೆ ಬಲವಾದ ಪೆಟ್ಟು ಬಿದ್ದು, ನೋವು ಅನುಭವಿಸುತ್ತಿದ್ದರೂ ಕೂಡ, ನಿರ್ದೇಶಕನಾಗಿ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ದುನಿಯಾ ವಿಜಿ ಅವರು, ಆ ನೋವಿನ ನಡುವೆಯೂ ಕೂಡ ಚಿತ್ರೀಕರಣ ಮುಂದುವರೆಸಿದ್ದಾರೆ. ಈ ಬಗ್ಗೆ ಭೀಮ ನಿರ್ಮಾಪಕ ಕೃಷ್ಣ ಸಾರ್ಥಕ್ ಮಾತನಾಡಿ, ಇನ್ನು 40 ದಿನಗಳ ಚಿತ್ರೀಕರಣ ಬಾಕಿಯಿದೆ. ನಾಲ್ಕು ಬಹುಮುಖ್ಯ ಭಾಗಗಳ ಚಿತ್ರೀಕರಣ ನಡೆಯುತ್ತಿದೆ. ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಕಳೆದ ವಾರ ನಟ ವಿಜಯ್ ಅವರ ಬಲಗಾಲಿಗೆ ಏಟು ಬಿದ್ದಿತ್ತು. ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದು, ನೋವಿನ ನಡುವೆಯೇ ಚಿತ್ರೀಕರಣ ಮಾಡ್ತಿದ್ದಾರೆ. ನಟ ವಿಜಯ್ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

‘ಭೀಮ’ನ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹೆಚ್ಚಿನ ನಿರೀಕ್ಷೆಗಳನ್ನು ಕೂಡ ಈ ಚಿತ್ರ ತನ್ನ ಮೇಲೆ ಹೊತ್ತಿದೆ. ‘ಸಲಗ’ಕ್ಕೆ ಸಂಗೀತ ನೀಡಿ, ಮೌಲ್ಯ ಹೆಚ್ಚಿಸಿದ್ದ ಚರಣ್ ರಾಜ್ ಅವರೇ ‘ಭೀಮ’ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ರಂಗಭೂಮಿಯಿದ ಬಂದಿರುವಂತಹ ಅಶ್ವಿನಿ ಅವರು ಚಿತ್ರದ ನಾಯಕಿಯಾಗಿದ್ದು, ಜೊತೆಗೆ ಗೋಪಾಲ ಕೃಷ್ಣ ದೇಶಪಾಂಡೆ, ಗಿಲಿಗಿಲಿ ಚಂದ್ರು, ಕಾಕ್ರೋಚ್ ಸುಧಿ, ಕಲ್ಯಾಣಿ ರಾಜು, ಡ್ರಾಗನ್ ಮಂಜು ಮುಂತಾದವರು ಕಥೆಯ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.‌

ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್

Share This Article