‘ಕೆಜಿಎಫ್’ ಚಿತ್ರದಲ್ಲಿ ದುರ್ಗಾಮಾತೆ, ‘ಸಲಾರ್’ ನಲ್ಲಿ ಕಾಳಿಮಾತೆ: ಪ್ರಶಾಂತ್ ನೀಲ್ ಗೆಲುವಿನ ಸೂತ್ರ

Public TV
2 Min Read

ಪ್ರಶಾಂತ್ ನೀಲ್ ಅಡ್ಡದಿಂದ ಇನ್ನೊಂದು ಸಮಾಚಾರ ಹೊರ ಬಿದ್ದಿದೆ. ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಲಾರ್‌ (Salaar)ನಲ್ಲಿ ಮತ್ತೊಂದು ದೈವ ಶಕ್ತಿಯನ್ನು ತಂದು ನಿಲ್ಲಿಸಲಿದ್ದಾರೆ ನೀಲ್. ಕೆಜಿಎಫ್‌ನಲ್ಲಿ ದುರ್ಗಾಮಾತೆ (Durga Maate) ರುದ್ರಾವತಾರದ ದರ್ಶನ ಮಾಡಿಸಿದ್ದರು. ಸಲಾರ್‌ನಲ್ಲಿ ಪ್ರಭಾಸ್‌ಗೆ ಕಾಳಿ ಮಾತೆ (Kaali Maate) ಶಕ್ತಿ ತುಂಬಲಿದ್ದಾರೆ.

ಪ್ರಶಾಂತ್ ನೀಲ್ (Prashant Neel) ನಿರಾತಂಕವಾಗಿದ್ದಾರೆ. ಇನ್ನೆರಡು ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಲಾರ್ ಚಿತ್ರದ ಬಾಕಿ ಕೆಲಸ ಮುಗಿಸಲಿದ್ದಾರೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಬಿರುಸಾಗಿ ನಡೆದಿದೆ. ರವಿ ಬಸ್ರೂರ್ ನೇತೃತ್ವದಲ್ಲಿ ಹಿನ್ನೆಲೆ ಸಂಗೀತದ ಕೆಲಸ ಬಸ್ರೂರಿನ ಸ್ಟುಡಿಯೋದಲ್ಲಿ ಸಾಗಿದೆ. ಈ ಹೊತ್ತಲ್ಲಿ ಎದ್ದಿದೆ ನೋಡಿ ಪ್ರಶಾಂತ್ ನೀಲ್‌ಗೆ ಶಕ್ತಿ ಅಥವಾ ಭಕ್ತಿ ತುಂಬಿರುವ ಇಬ್ಬರು ದೈವ ಮಾತೆಯರ ಸಮಾಚಾರ. ಕೆಜಿಎಫ್‌ನಲ್ಲಿ ದುರ್ಗಾಮಾತೆ ಮಹಿಮೆ ಸಾರಿದ್ದರು. ಸಲಾರ್‌ನಲ್ಲಿ ಕಾಳಿ ಮಾತೆಯಾ? ಏನಿದು ರಹಸ್ಯ? ಇದನ್ನೂ ಓದಿ:2ನೇ ಮಗುವಿನ ಹೆಸರನ್ನ ರಿವೀಲ್‌ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ

ಕೆಜಿಎಫ್ ಮೊದಲ ಭಾಗದ ಕ್ಲೈಮ್ಯಾಕ್ಸ್ ನಲ್ಲಿ ದುರ್ಗಾ ಮಾತೆಯ ಬೃಹತ್ ಮೂರ್ತಿ ತೋರಿಸಿದ್ದು ನೆನಪಿರಬೇಕು. ಆ ದೇವಿಯ ಪಾದದಡಿಯಲ್ಲಿಯೇ ರಾಕಿಭಾಯ್ ಗರುಡನ ವಧೆ ಮಾಡುತ್ತಾನೆ. ಸಂಪೂರ್ಣ ಕತ್ತಲಲ್ಲಿ. ಯಾವುದೇ ಕೃತಕ ಲೈಟಿನ ಬೆಳಕಿಲ್ಲದೆ, ಬರೀ ಬೆಂಕಿ ದೊಂದಿಯಲ್ಲಿಯೇ ಅದನ್ನು ಚಿತ್ರಿಸಿದ್ದರು. ಇಡೀ ಚಿತ್ರಕ್ಕೆ ಆ ದೃಶ್ಯ ಸೇಮ್ ಟೈಮ್ ದುರ್ಗಾಮಾತೆ ದರ್ಶನ ಹೊಸ ಮೆರುಗು ನೀಡಿತ್ತು. ಸಲಾರ್‌ನಲ್ಲಿ ಅದೇ ರೀತಿ ಕಾಳಿ ಮಾತೆಯ ದಿವ್ಯ ರೂಪ ತೋರಿಸಲಿದ್ದಾರಂತೆ.

ಕೆಜಿಎಫ್ ಎರಡು ಸರಣಿಯ ಗೆಲುವು ಸುಮ್ಮನೆ ಬಂದಿದ್ದಲ್ಲ. ಆದರೆ ನೀಲ್ ಮೇಲೆ ಅದೊಂದು ಆರೋಪ ಇದೆ. ಕೆಜಿಎಫ್ ಗೆಲುವನ್ನು ಮೀರಿಸಿದ ಸಿನಿಮಾ ಕೊಡಬೇಕು. ಸಲಾರ್‌ನಲ್ಲಿ ಹೊಸ ಲೋಕ ತೋರಿಸಬೇಕು. ಹಾಗೆಯೇ ಬಂಪರ್ ಗೆಲುವು ಸಾಧಿಸಬೇಕು. ಅದಕ್ಕೆ ಏನೇನು ಬೇಕೊ ಎಲ್ಲ ಮಾಡಿದ್ದಾರೆ. `ಮತ್ತದೇ ಕತ್ತಲು. ಕತ್ತಲು ಲೋಕ…’ ಹೀಗಂತ ಆಡಿಕೊಂಡವರ ಬಾಯಿಗೆ ಕರಿಗಡುಬು ಇಡಬೇಕು. ದುರ್ಗಾಮಾತೆಯಂತೆ ಇದೀಗ ಕಾಳಿ ಮಾತೆ ಕೈ ಹಿಡಿಯುತ್ತಾಳಾ? ಕಾಯದೇ ಬೇರೆ ದಾರಿ ಇಲ್ರಪ್ಪಾ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್