ಕೊಟ್ಟಿರುವ ದೂರು ಸುಳ್ಳು, ಮೂರು ದಿನದಲ್ಲಿ ಪತ್ನಿ, ಮಗಳ ಡ್ರಾಮಾ ಬಯಲು: ದುನಿಯಾ ವಿಜಿ ಸ್ಪಷ್ಟನೆ

Public TV
2 Min Read

ಬೆಂಗಳೂರು: ನನ್ನ ವಿರುದ್ಧ ಮಗಳು ಮೋನಿಕಾ ಸುಳ್ಳು ಆರೋಪದ ದೂರನ್ನು ನೀಡಿದ್ದಾಳೆ ಎಂದು ದುನಿಯಾ ವಿಜಿ ಸ್ಪಷ್ಟನೆ ನೀಡಿದ್ದಾರೆ.

ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಜಿ, ನನ್ನ ಮನೆಗೆ ಯಾರೂ ಬಂದಿಲ್ಲ. ಮೋನಿಕಾ ಮನೆಗೆ ಬಂದಿರುವುದು ನಾನು ರೆಕಾರ್ಡ್ ಮಾಡಿದ್ದೇನೆ. ನನ್ನ ಮೇಲೆ ಎಫ್‍ಐಆರ್ ದಾಖಲಾಗಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಸದ್ಯ ಎಲ್ಲ ಮಾಹಿತಿಯನ್ನು ಗಿರಿನಗರ ಪೊಲೀಸ್ ಠಾಣೆಯಲ್ಲಿ ನೀಡಿದ್ದೇನೆ. ಮೋನಿಕಾ ಗಿರಿನಗರ ಠಾಣೆಗೆ ಬಂದಿದ್ದಾಗ ನಾನು ಆಕೆಗೆ ಕರೆ ಮಾಡಿ ಪೊಲೀಸರು ಬರುತ್ತಿದ್ದಾರೆ ಎಂದು ಹೇಳಿದೆ ಆಗ ಆಕೆ ಅಲ್ಲಿಂದ ಓಡಿ ಹೋಗಿ ಈ ರೀತಿಯ ದೂರು ನೀಡಿದ್ದಾಳೆ ಎಂದು ತಿಳಿಸಿದರು.

ನಮ್ಮ ಮನೆಗೆ ಬರಲು ಯಾರಿಗೂ ಅವಕಾಶವಿಲ್ಲ. ಏಕೆಂದರೆ ಮನೆಯಲ್ಲಿ ನನ್ನ ತಂದೆ ಹಾಗೂ ತಾಯಿ ಮಾತ್ರ ಇದ್ದಾರೆ. ನಾನು ಊರಿನಲ್ಲಿದ್ದೆ. ಹೀಗಿರುವಾಗ ಕಳೆದ ವಾರ ನಾಗರತ್ನ ಮನೆ ಮೇಲೆ ದಾಳಿ ಮಾಡಿಸಿದ್ದಳು. ಆಗ ನನ್ನ ತಂದೆ- ತಾಯಿ ಮಗ ಇಲ್ಲದ ಸಮಯದಲ್ಲಿ ನಮ್ಮ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿಗೆ ಪ್ರತಿ ದೂರು ನೀಡಲು ತಾಯಿ ಮತ್ತು ಮಗಳು ಈ ನಾಟಕವಾಡಿದ್ದಾರೆ ಎಂದು ವಿಜಿ ಹೇಳಿದರು.

ಮೋನಿಕಾ ಬಾಗಿಲು ಬಡಿದಾಗ ನಾವು ಬಾಗಿಲು ತೆಗೆಯಲಿಲ್ಲ. ಆಕೆ ಬಾಗಿಲು ಚಚ್ಚಿದ್ದಾಳೆ. ನಂತರ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಗ ಹೋಗಿ ದೂರು ನೀಡಿದ್ದಾಳೆ. ಆದರೆ ಆಸ್ಪತ್ರೆಗೆ ದಾಖಲಾಗುವಾಗ ವೈದ್ಯರು ನಿನಗೆ ಯಾವುದೇ ಗಾಯವಾಗಿಲ್ಲ ಎಂದು ಹೇಳಿ ಮೆಡಿಕಲ್ ಸರ್ಟಿಫಿಕೇಟ್ ನೀಡಿದ್ದಾರೆ. ಇವರು ಡ್ರಾಮಾ ಮಾಡುತ್ತಿದ್ದಾರೆ. ಮೂರು ದಿನಗಳಲ್ಲಿ ಎಲ್ಲ ಮಾಧ್ಯಮಗಳ ಮುಂದೆ ನಾನು ನಿಜವನ್ನು ಹೊರ ಹಾಕುತ್ತೇನೆ ಎಂದರು.

ಇವರಿಗೆ ಬೆಳಗ್ಗೆ ಎದ್ದರೆ ದೂರು, ಸಂಜೆ ಎಫ್‍ಐಆರ್ ಹಾಗೂ ಟಿವಿಯಲ್ಲಿ ಬರುವ ಆಸೆ. ನನ್ನ ಮೇಲೆ ಎಫ್‍ಐಆರ್ ದಾಖಲಾಗಲು ಈ ರೀತಿ ಮಾಡುತ್ತಿದ್ದಾರೆ. ನಾನು ತೊಂದರೆಯಲ್ಲಿದ್ದರೆ ಅವರಿಗೆ ಖುಷಿ. ಹಾಗಾಗಿ ಅವರು ಹೀಗೆ ಮಾಡುತ್ತಿದ್ದಾರೆ. ನನ್ನ ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. ನನ್ನ ತಂದೆಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ನನ್ನ ತಾಯಿಗೆ ನಡೆದಾಡಲು ಆಗಲ್ಲ. ಹೀಗಿರುವಾಗ ನಾಗರತ್ನ ನನ್ನ ತಂದೆ- ತಾಯಿ ವಿರುದ್ಧ ದೂರು ನೀಡಿದ್ದಳು. ಮೋನಿಕಾ ಬಾಗಿಲು ಬಡಿಯುವಾಗ ನಾನು ಮನೆಯೊಳಗೆ ಇದ್ದೆ. ಈ ವೇಳೆ ಮನೆಯಲ್ಲಿದ್ದ ಮೂವರು ಯುವಕರನ್ನು ಕಿಟಕಿಯಿಂದ ಮೋನಿಕಾಳ ನೋಡುತ್ತಿದ್ದಳು. ಆ ಮೂವರನ್ನು ನೋಡಿ ಮೋನಿಕಾ ಅವರ ವಿರುದ್ಧ ಕೂಡ ದೂರು ದಾಖಲಿಸಿದ್ದಾಳೆ. ಮೋನಿಕಾ ಪ್ರೀಪ್ಲಾನ್ ಮಾಡಿಕೊಂಡು ಈ ರೀತಿ ಮಾಡಿದ್ದಾಳೆ. ನಾಗರತ್ನ ಬರಿ ಸುಳ್ಳು ಹೇಳುತ್ತಾರೆ, ಡ್ರಾಮಾ ಮಾಡುತ್ತಾರೆ ಅವರ ಮಾತನ್ನು ಯಾರೂ ನಂಬಬೇಡಿ. ಮೂರು ದಿನ ನನಗೆ ಸಮಯ ಕೊಡಿ ನಾನು ಎಲ್ಲ ಸತ್ಯವನ್ನು ಹೇಳುತ್ತೇನೆ ಎಂದು ವಿಜಯ್ ಹೇಳಿದರು. ಇದನ್ನೂ ಓದಿ:ದುನಿಯಾ ವಿಜಿ ವಿರುದ್ಧ ಮಗಳಿಂದಲೇ ದೂರು- ಎಫ್‍ಐಆರ್ ದಾಖಲು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *