ಹೊಸ ಹೇರ್ ಸ್ಟೈಲಿನಲ್ಲಿ ಮಿಂಚಿದ ದುನಿಯಾ ವಿಜಯ್ ಪುತ್ರಿ

By
1 Min Read

ಸ್ಯಾಂಡಲ್‌ವುಡ್ (Sandalwood) ನಟ ದುನಿಯಾ ವಿಜಯ್ (Duniya Vijay) ಪುತ್ರಿಯರಾದ ರಿತಾನ್ಯಾ ಮತ್ತು ಮೋನಿಷಾ (Monisha Vijay) ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಇದರ ನಡುವೆ ವಿಜಯ್ 2ನೇ ಪುತ್ರಿ ಮೋನಿಷಾ ಹೊಸ ಹೇರ್ ಸ್ಟೈಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ವಿಜಯ್ ಕಿರಿಯ ಮಗಳು ಮೋನಿಷಾ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಟನೆಗೆ ಸಂಬಂಧಿಸಿದ ಕೋರ್ಸ್ ಕಲಿಯುತ್ತಿದ್ದಾರೆ. ಈ ನಡುವೆ ಮೋನಿಷಾ ಸ್ಟೈಲೀಶ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.

ಮೋನಿಷಾ ವಿಜಯ್ ನಯಾ ಲುಕ್ ನೋಡಿ ವಾವ್ ನೂಡಲ್ಸ್ ಹೇರ್ ಸ್ಟೈಲ್ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ. ನೀವು ಹೀಗೆ ರೆಡಿಯಾದ್ರೆ ನಮ್ಮಂತಹ ಹುಡುಗರ ಗತಿಯೇನು? ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ವಿಜಯ್ ದೇವರಕೊಂಡ

ಮೋನಿಷಾ ಕಲಿಕೆಯ ಜೊತೆ ಫ್ಯಾಷನ್ ಬಟ್ಟೆಗಳ ಬ್ರಾಂಡ್‌ವೊಂದನ್ನು ನೋಡಿಕೊಳ್ತಿದ್ದಾರೆ. ‘ಶುಗರ್ ಬೈ ಮೋನಿಷಾ’ ಎಂಬ ಬ್ರ್ಯಾಂಡ್ ನಿರ್ಮಿಸಿದ್ದಾರೆ. ಇದನ್ನೂ ಓದಿ:ಕುಟುಂಬದ ಜೊತೆ ಕೇದಾರನಾಥಕ್ಕೆ ಶಿಲ್ಪಾ ಶೆಟ್ಟಿ ಭೇಟಿ

ಅಂದಹಾಗೆ, ವಿಜಯ್ ಮೊದಲ ಪುತ್ರಿ ರಿತಾನ್ಯಾ ‘ಕಾಟೇರ’ ಚಿತ್ರದ ರೈಟರ್ ಜಡೇಶ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಪ್ಪನ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ.

Share This Article