ವಿಜಯ್ ಅಡ್ಡಾದಿಂದ ‘ಭೀಮ’ ಮೇಕಿಂಗ್ ವಿಡಿಯೋ ಔಟ್

Public TV
1 Min Read

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ‘ಭೀಮ’ನ (Bheema Film) ಅಖಾಡದಲ್ಲಿ ಏನಾಗ್ತಿದೆ? ಆ್ಯಕ್ಟರ್ ಅಷ್ಟೇ ಅಲ್ಲ. ತಾನು ಬೆಸ್ಟ್ ಡೈರೆಕ್ಟರ್ ಕೂಡ ಅಂತ ಪ್ರೂವ್ ಮಾಡಿರೋ ವಿಜಯ್ (Duniya Vijay) ಭೀಮ ಚಿತ್ರೀಕರಣ ಯಾವ ಹಂತದಲ್ಲಿದೆ? ಭೀಮನ ಅಡ್ಡದಿಂದ ಬಂದ ಸ್ಪೆಷಲ್ ಮೇಕಿಂಗ್ ವೀಡಿಯೋ ರಿಲೀಸ್ ಆಗಿದೆ.

ರಾ ಮೇಕಿಂಗ್ ಮೂಲಕ ಸೌಂಡ್ ಮಾಡ್ತಿರೋ ‘ಭೀಮ’ ಚಿತ್ರದ ಹೊಸ ಮೇಕಿಂಗ್ ವೀಡಿಯೋ ರಿಲೀಸ್ ಆಗಿದೆ. ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳೋದ್ರ ಜೊತೆಗೆ ನಟಿಸಿರುವ ಭೀಮನ ಸೌಂಡ್ ಆರಂಭದಿಂದಲೂ ಜೋರಾಗಿದೆ. ಇದೀಗ ಮುಗಿಯುವ ಹಂತದಲ್ಲಿರುವ ಚಿತ್ರೀಕರಣದ ಸುತ್ತ ಮುತ್ತ ಒಂದ್ ರೌಂಡ್ ಹಾಕ್ಸೋಕೆ ಎಂದೇ ಫ್ರೆಶ್ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದೆ ಭೀಮ ಟೀಮ್. ಇದನ್ನೂ ಓದಿ:ಒಂದು ರಾತ್ರಿಗೆ 25 ಲಕ್ಷ ಎಂದಿದ್ದ ರಾಜಕಾರಣಿ ರಾಜು ವಿರುದ್ಧ ತ್ರಿಶಾ ಕಾನೂನು ಸಮರ

ಶೂಟಿಂಗ್ ಹಂತದಲ್ಲೇ ‘ಭೀಮ’ ಮಾಡ್ತಿರುವ ಅಬ್ಬರ ಅಷ್ಟಿಷ್ಟಲ್ಲ. ಆಗೊಂದು ಈಗೊಂದು ಬರುವ ಪಂಚಿಂಗ್ ಸಾಂಗ್ಸ್ ಭೀಮನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಆಫ್ಟರ್ ‘ಸಲಗ’ ಸಕ್ಸಸ್ ಭೀಮನಾಗಿ ವಿಜಯ್ ಸಾಹಸ ಅಷ್ಟಿಷ್ಟಲ್ಲ. ನೈಜತೆಗೆ ಹೆಚ್ಚು ಒತ್ತು ಕೊಡುವ ವಿಜಯ್ ಲೋಕಲ್ ಏರಿಯಾಗಳಲ್ಲೇ ಚಿತ್ರೀಕರಣ ಮಾಡಿದ್ದಾರೆ. ಒಟ್ನಲ್ಲಿ ನಿರೀಕ್ಷೆ ಹಿಡಿದಿಟ್ಟುಕೊಂಡಿದ್ದಾರೆ ದುನಿಯ ವಿಜಯ್.

‘ಸಲಗ’ನಾಗಿ (Salaga) ಗೆದ್ದ ವಿಜಯ್ ಈಗ ಭೀಮನಾಗಿ ಆರ್ಭಟಿಸಲು ಬರುತ್ತಿದ್ದಾರೆ. ಮತ್ತೆ ಡೈರೆಕ್ಷನ್‌ನಲ್ಲಿ ಗೆಲ್ಲುತ್ತಾರಾ ವಿಜಯ್  ಕಾದುನೋಡಬೇಕಿದೆ.

Share This Article