ವಿಜಿ ಮೊದಲ ಪತ್ನಿ ನಾಗರತ್ನಗೆ ಮಧ್ಯಂತರ ನಿರೀಕ್ಷಣಾ ಜಾಮೀನು

Public TV
1 Min Read

ಬೆಂಗಳೂರು: ನಟ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಗರದ ಸಿಟಿ ಸಿವಿಲ್ ಕೋರ್ಟ್ 50 ಸಾವಿರ ರೂ. ಬಾಂಡ್ ಷರತ್ತು ವಿಧಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಪ್ರಕರಣವನ್ನು ನ.12ಕ್ಕೆ ಮುಂದೂಡಿದೆ.

ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನಾಗರತ್ನ ಅವರ ಪರ ವಕೀಲರು ಇನ್ನು 2 ದಿನದಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಮಕ್ಕಳೊಂದಿಗೆ ತಾಯಿ ಇರಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಇದರ ಹಿನ್ನೆಲೆಯಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ನೀಡಿದೆ.

ನ್ಯಾಯಾಲಯಕ್ಕೆ 2 ದಿನ ರಜೆ ಇದ್ದು ಕೋರ್ಟ್ ಆದೇಶ ಪೊಲೀಸರಿಗೆ ತಲುಪವರೆಗೂ ನಾಗರತ್ನ ಬಂಧನ ಮಾಡಬಹುದಾಗಿದೆ.

ನಾಗರತ್ನ ನಾಪತ್ತೆ: ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಬಳಿಕ ನಾಗರತ್ನ ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿದ್ದಾರೆ. ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸಿದ್ದರೂ ಬಂಧಿಸುವಲ್ಲಿ ವಿಫಲವಾಗಿದ್ದರು.

ಕೀರ್ತಿಗೌಡ ಅವರು ತಮ್ಮ ಮೇಲೆ ನಡೆದ ಹಲ್ಲೆ ಸಂಬಂಧಿಸಿದಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಲ್ಲೆ ಮತ್ತು ಅಂಗಾಂಗ ಊನಗೊಳಿಸಿದ ಆರೋಪದಡಿ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿತ್ತು. ಹಲ್ಲೆ ವಿಡಿಯೋ ಲಭ್ಯವಾಗುವುದಕ್ಕೂ ಮೊದಲು ಕೀರ್ತಿ ಅವರು ದೂರು ದಾಖಲಿಸಿದ್ದರು. ಆ ವೇಳೆ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 309 ಅಡಿ ಮಾತ್ರ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 326 ಸೆಕ್ಷನ್ ಹೆಚ್ಚುವರಿಯಾಗಿ ಹಾಕಲು ಪೊಲೀಸರು ನಿರ್ಧಾರ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *