ದೇಹಕ್ಕೆ, ಮನಸ್ಸಿಗೆ ಮುದನೀಡುವ ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್

Public TV
1 Min Read

ಏಪ್ರಿಲ್ ಹಾಗೂ ಮೇ ತಿಂಗಳು ಅತ್ಯಂತ ಬಿಸಿಲಿನ ಸಮಯವಾದ್ದರಿಂದ ಜನರು ತಮ್ಮ ದೇಹಕ್ಕೆ ತಂಪನ್ನು ನೀಡುವ ಪಾನೀಯಗಳ ಮೊರೆ ಹೋಗುತ್ತಾರೆ. ಬೀದಿ ಬದಿಯಲ್ಲಿ ದೊರೆಯುವ ಪಾನೀಯಗಳು ಕೆಮಿಕಲ್ ಮಿಶ್ರಿತವಾಗಿದ್ದು, ನಮ್ಮ ಆರೋಗ್ಯವನ್ನು ಹದಗೆಡಿಸುವ ಸಾಧ್ಯತೆಯಿದೆ. ಆದ್ದರಿಂದ ಸಾಧ್ಯವಾದಷ್ಟು ಮನೆಯಲ್ಲಿಯೇ ಪಾನೀಯಗಳನ್ನು ಮಾಡಿ ಕುಡಿದರೆ ಒಳ್ಳೆಯದು. ಇವತ್ತು ಆರೋಗ್ಯಕರ ಹಾಗೂ ದೇಹಕ್ಕೆ ತಂಪೆನಿಸುವ ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್  ರೆಸಿಪಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ

ಬೇಕಾಗುವ ಸಾಮಾಗ್ರಿಗಳು:
ಅಂಜೂರದ ಹಣ್ಣು- 3ರಿಂದ 4
ಬಾದಾಮಿ- ಕಾಲು ಕಪ್
ಗೋಡಂಬಿ- ಕಾಲು ಕಪ್
ಒಣ ದ್ರಾಕ್ಷಿ – ಕಾಲು ಕಪ್
ಪಿಸ್ತಾ – ಕಾಲು ಕಪ್
ಖರ್ಜೂರ- 7ರಿಂದ 8
ತಣ್ಣಗಿನ ಹಾಲು- ಅರ್ಧ ಲೀಟರ್
ಕೇಸರಿ- ಸ್ವಲ್ಪ
ಸಕ್ಕರೆ- 2 ಚಮಚ

ಮಾಡುವ ವಿಧಾನ:

  • ಮೊದಲಿಗೆ ಅಂಜೂರದ ಹಣ್ಣುಗಳನ್ನು ನೀರಿನಲ್ಲಿ ನೆನೆಹಾಕಿ ಅರ್ಧಗಂಟೆ ನೆನೆಯಲು ಬಿಡಿ. ಹಾಗೆಯೇ ಖರ್ಜೂರದ ಬೀಜವನ್ನು ತೆಗೆದು ಅದನ್ನೂ ಸಹ ನೆನೆಸಿ. ಖರ್ಜೂರ ಹಾಗೂ ಅಂಜೂರ ನೆನೆಸಿದ ಬಳಿಕ ಅದನ್ನು ಸಾಧಾರಣ ಗಾತ್ರದಲ್ಲಿ ಹೆಚ್ಚಿಕೊಳ್ಳಿ.
  • ಬಳಿಕ ಒಂದು ಮಿಕ್ಸಿ ಜಾರಿಗೆ ಎಲ್ಲಾ ಡ್ರೈಫ್ರೂಟ್ಸ್‌ಗಳನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ತಣ್ಣಗಿನ ಹಾಲನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ತೆಂಗಿನ ಹಾಲನ್ನು ಸಹ ಬಳಸಿಕೊಳ್ಳಬಹುದು. ಬಳಿಕ ಇದಕ್ಕೆ ಸ್ವಲ್ಪ ಕೇಸರಿಯನ್ನು ಸೇರಿಸಿಕೊಳ್ಳಿ. ಇದು ಉತ್ತಮ ರುಚಿಯನ್ನು ನೀಡುತ್ತದೆ.
  • ನಂತರ ಇದಕ್ಕೆ ಉಳಿದ 2 ಕಪ್ ಹಾಲನ್ನು ಸೇರಿಸಿಕೊಂಡು ಮತ್ತೊಮ್ಮೆ ರುಬ್ಬಿಕೊಳ್ಳಿ. ಸಕ್ಕರೆ ಅಥವಾ ಬೆಲ್ಲ ಇಷ್ಟಪಡುವವರು 1ರಿಂದ 2 ಚಮಚ ಸಕ್ಕರೆ ಅಥವಾ ಬೆಲ್ಲವನ್ನೂ ಸೇರಿಸಿಕೊಂಡು ರುಬ್ಬಿ.
  • ಈಗ ಈ ಮಿಲ್ಕ್‌ಶೇಕ್ ಅನ್ನು ಒಂದು ಗ್ಲಾಸಿಗೆ ಹಾಕಿಕೊಳ್ಳಿ. ಡ್ರೈಫ್ರೂಟ್ಸ್ ತಿನ್ನಲು ಇಚ್ಚಿಸುವವರು ಇದರ ಮೇಲೆ ಚಿಕ್ಕದಾಗಿ ಹೆಚ್ಚಿದ ಡ್ರೈಫ್ರೂಟ್ಸ್ ಅನ್ನು ಹಾಕಿ ಅಲಂಕರಿಸಿಕೊಳ್ಳಿ. ಈಗ ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್ ಸವಿಯಲು ಸಿದ್ಧ. ಇದನ್ನೂ ಓದಿ: ಟ್ರೈ ಮಾಡಿ ಮುಂಬೈ ಮಸಾಲ ಸ್ಯಾಂಡ್‌ವಿಚ್….
Share This Article