ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ದೃಷ್ಟಿಬೊಟ್ಟು’ ಸೀರಿಯಲ್ ನಟಿ

Public TV
1 Min Read

ದೃಷ್ಟಿಬೊಟ್ಟು, ನಾಗಿಣಿ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿರುವ ಗೌತಮಿ ಜಯರಾಮ್ (Gowthami Jayaram) ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ಜರುಗಿದೆ. ಎಂಗೇಜ್‌ಮೆಂಟ್‌ನ ಸಂಭ್ರಮದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ದೃಷ್ಟಿಬೊಟ್ಟು’ ಸೀರಿಯಲ್‌ನ ಇಂಪನಾ ಪಾತ್ರಧಾರಿ ಗೌತಮಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಉದಯ್ ಶಂಕರ್ ರಾಜ್ (Uday Shankar Raj) ಜೊತೆ ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ‘ದೃಷ್ಟಿಬೊಟ್ಟು’ ಟೀಮ್ ಕೂಡ ಸಾಕ್ಷಿಯಾಗಿದೆ.

ಎರಡು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಇಬ್ಬರೂ ರಿಂಗ್ ಬದಲಿಸಿಕೊಂಡಿದ್ದಾರೆ. ಉದ್ಯಮಿ ಉದಯ್ ಶಂಕರ್ ರಾಜು ಜೊತೆ ಸದ್ಯದಲ್ಲೇ ಮದುವೆ ನಡೆಯಲಿದೆ. ಇದನ್ನೂ ಓದಿ:ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ: ಚಂದನ್ ಶೆಟ್ಟಿ ಸ್ಪಷ್ಟನೆ

ಇನ್ನೂ ‘ದೃಷ್ಟಿಬೊಟ್ಟು’ ಸೀರಿಯಲ್‌ನಲ್ಲಿ ಹೀರೋ ದತ್ತನ ಜೊತೆ ಇಂಪನಾ ಮದುವೆ ನಡೆಯಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ರಿಯಲ್ ಲೈಫ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಿರುವ ನಟಿಗೆ ಫ್ಯಾನ್ಸ್ ಶುಭಕೋರಿದ್ದಾರೆ.

Share This Article