ವಿಮಾನದಲ್ಲಿ ಪ್ರಯಾಣಿಸ್ತಿದ್ದಾಗ ಮಹಿಳೆ ಪಕ್ಕದಲ್ಲೇ ಸೂಸು ಮಾಡ್ದ!

Public TV
1 Min Read

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮಹಿಳೆಯ ಪಕ್ಕದಲ್ಲೇ ಸೂಸು ಮಾಡಿದ ಘಟನೆ ನಡೆದಿದೆ.

ಏರ್ ಇಂಡಿಯಾ ವಿಮಾನವು ನ್ಯೂಯಾರ್ಕ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಮಹಿಳೆಯ ಮಗಳು ಈ ಬಗ್ಗೆ ಈ ಟ್ವೀಟ್ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಟ್ವೀಟ್ ನಲ್ಲೇನಿತ್ತು?:
ವಿಮಾನದಲ್ಲಿ ಪ್ರಯಾಣಿಸಿದ ಮಹಿಳೆಯ ಮಗಳು ಇಂದ್ರಾಣಿ ಘೋಷ್, `ಶುಕ್ರವಾರ AI 102  ಏರ್ ಇಂಡಿಯಾದಲ್ಲಿ ಚಲಿಸುತ್ತಿದ್ದಾಗ ಪ್ರಯಾಣಿಕನೊಬ್ಬ ಪ್ಯಾಂಟ್ ಜಾರಿಸಿ ಅಮ್ಮ ಕುಳಿತಿದ್ದ ಸೀಟ್ ಪಕ್ಕದಲ್ಲೇ ಸೂಸು ಮಾಡಿದ್ದಾನೆ. ಇದರಿಂದಾಗಿ ಒಬ್ಬರೇ ಪ್ರಯಾಣಿಸುತ್ತಿದ್ದ ನನ್ನ ಅಮ್ಮ ಗಾಬರಿಯಿಂದ ಆಘಾತಕ್ಕೊಳಗಾಗಿದ್ದಾರೆ’ ಅಂತ ಬರೆದುಕೊಂಡಿದ್ದಾರೆ.

ಇಂದ್ರಾಣಿ ಟ್ವೀಟ್ ಗಮನಿಸಿದ ಕೇಂದ್ರ ವಿಮಾನಯಾನ ಖಾತೆಯ ಸಚಿವ ಜಯಂತ್ ಸಿನ್ಹಾ ತಕ್ಷಣವೇ ಪ್ರತಿಕ್ರಿಯಿಸಿದ್ದು, ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಏರ್ ಇಂಡಿಯಾಗೆ ಸೂಚಿಸಿದ್ದಾರೆ. ಅಲ್ಲದೇ ಈ ಪ್ರಕರಣದ ವರದಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಥವಾ ಇಲಾಖೆಗೆ ಸಲ್ಲಿಸಬೇಕು ಅಂತ ಹೇಳಿದ್ದಾರೆ.

ಇದೇ ವೇಳೆ ನಿಮ್ಮ ಅಮ್ಮ ಇಂತಹ ಕೆಟ್ಟ ಸನ್ನಿವೇಶದಲ್ಲಿ ಒಬ್ಬರೇ ಪ್ರಯಾಣ ಬೆಳೆಸಿದ್ದು ದುರದೃಷ್ಟಕರ ಅಂತ ಹೇಳಿ ಕ್ಷಮೆಯಾಚಿಸಿದ್ದಾರೆ. ವಿಷಾದವೆಂದರೆ ಈ ಬಗ್ಗೆ ಇದೂವರೆಗೂ ಏರ್ ಇಂಡಿಯಾ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸರಗೊಂಡ ಇಂದ್ರಾಣಿ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದಾರೆ. ಆ ಬಳಿಕ ಎಚ್ಚೆತ್ತ ಏರ್ ಇಂಡಿಯಾ ತನಿಖೆ ನಡೆಸಲು ಮುಂದೆ ಬಂದಿದೆ.

ಇದೇ ವೇಳೆ ಇಂದ್ರಾಣಿ ಇಂತಹ ಅಸಹ್ಯಕರ ಘಟನೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ವಿಮಾನಯಾನ ಕಂಪೆನಿಗಳಿಗೆ ಆಗ್ರಹಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಏರ್‍ಇಂಡಿಯಾವನ್ನು ಪ್ರಶ್ನಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *