ಕುಡಿದು ಗಲಾಟೆ ಮಾಡ್ತಿದ್ದ KSRTC ಸಿಬ್ಬಂದಿ- ಬುದ್ಧಿ ಹೇಳಿದ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆಗೆ ಯತ್ನ

Public TV
0 Min Read

ತುಮಕೂರು: ಕುಡಿದ ಮತ್ತಲ್ಲಿ ಗಲಾಟೆ ಮಾಡ್ತಿದ್ದ ಕೆಎಸ್‍ಆರ್‍ಟಿಸಿ ಸಿಬ್ಬಂದಿ ತಮಗೆ ಬುದ್ಧಿ ಹೇಳಿದ ಟ್ರಾಫಿಕ್ ಪೊಲೀಸ್ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ.

ತುಮಕೂರು ನಗರದ ಕೋಟೆ ಆಂಜನೇಯ ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಎಣ್ಣೆ ಕಿಕ್‍ನಲ್ಲಿ ತುಮಕೂರು ಕೆಎಸ್‍ಆರ್‍ಟಿಸಿ ಸಿಬ್ಬಂದಿ ಮಣಿಕಂಠ ಹಾಗೂ ಪುಟ್ಟರಾಜು ಗಲಾಟೆ ಮಾಡ್ತಿದ್ರು. ಈ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಟ್ರಾಫಿಕ್ ಪೇದೆ ಬುದ್ಧಿ ಹೇಳಿದ್ದಕ್ಕೆ, ಪೇದೆಗೆ ಅವಾಚ್ಯ ಶಬ್ದಗಳಿಂದ  ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.

ಸದ್ಯ ಇಬ್ಬರನ್ನು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *