ಗುಜರಾತ್ | ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ – ಓರ್ವ ಮಹಿಳೆ ಸಾವು, 7 ಜನರಿಗೆ ಗಾಯ

By
1 Min Read

ಗಾಂಧಿನಗರ : ಇಲ್ಲಿನ ವಡೋದರಾದಲ್ಲಿ (Vadodara) ಯುವಕನೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ 2 ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಉತ್ತರ ಪ್ರದೇಶದ ವಾರಣಾಸಿ ನಿವಾಸಿ ರಕ್ಷಿತ್ ಚೌರಾಸಿಯಾ (20) ವಡೋದರಾದ ವಿಶ್ವ ವಿದ್ಯಾಲಯವೊಂದರ ವಿದ್ಯಾರ್ಥಿ ಬಂಧಿತ ಆರೋಪಿ.

ಯುವಕ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ 2 ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿಯ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನು ಹೇಮಾನಿ ಪಾಟೀಲ್ ಎಂದು ಗುರುತಿಸಲಾಗಿದೆ. ಹೇಮಾನಿ ಪಾಟೀಲ್ ಮಗಳೊಂದಿಗೆ ಹೋಳಿ ಹಬ್ಬದ ಹಿನ್ನೆಲೆ ಬಣ್ಣ ತರಲು ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ಬಳಿಕ ಯುವಕ ಕಾರಿನಿಂದ ಇಳಿದು ದರ್ಪದಿಂದಲೇ ನಡೆದುಕೊಂಡು ಹೋಗಿದ್ದ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದರು. ಇದನ್ನೂ ಓದಿ: 178 ಜನರನ್ನು ಹೊತ್ತು ಹಾರುತ್ತಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ – 12 ಜನಕ್ಕೆ ಗಾಯ

ಯುವಕನ ಜೊತೆ ಆತನ ಸ್ನೇಹಿತ ಮಿತ್ ಚೌಹಾಣ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಅಪಘಾತದ ಬಳಿಕ ಆತ ಕಾರಿನಿಂದ ಇಳಿದು ನಾನು ಏನು ಮಾಡಿಲ್ಲ. ಆತನೇ ಕಾರು ಚಲಾಯಿಸುತ್ತಿದ್ದ ಎಂದು ಸ್ಥಳೀಯರ ಬಳಿ ಹೇಳಿದ್ದಾನೆ. ಮಿತ್ ಚೌಹಾಣ್ ವಡೋದರಾದಲ್ಲಿ ವಾಸಿಸುವ ಮತ್ತು ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿರುವ ಮಿತ್ ಚೌಹಾಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ: ಪುನೀತ್‌ ರೀ-ರಿಲೀಸ್‌ ಸಿನಿಮಾ ಬಗ್ಗೆ ಅನುಶ್ರೀ ಮಾತು

ಅಪಘಾತದ ರಭಸಕ್ಕೆ ಕಾರಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿದೆ. ಆರೋಪಿ ರಕ್ಷಿತ್ ರಸ್ತೆಯ ಉದ್ದಕ್ಕೂ ನಡೆಯುತ್ತಾ `ಓಂ ನಮಃ ಶಿವಾಯ’ ಎಂದು ಜಪಿಸಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article