ಶಿವಮೊಗ್ಗ: ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ ಚಾಲಕನಿಗೆ ಶಿವಮೊಗ್ಗ (Shivamogga) ಟ್ರಾಫಿಕ್ ಪೊಲೀಸರು 13,000 ರೂ. ದಂಡ ವಿಧಿಸಿದ್ದಾರೆ.
ಶಿವಮೊಗ್ಗದ ಐಬಿ ಸರ್ಕಲ್‍ನಲ್ಲಿ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಅಜಾಗರೂಕತೆಯಿಂದ ಚಾಲಕ ಅಂಬ್ಯುಲೆನ್ಸ್ (Ambulance) ಚಾಲನೆ ಮಾಡಿಕೊಂಡು ಬಂದಿದ್ದ. ತಪಾಸಣೆ ಸಮಯದಲ್ಲಿ ಚಾಲಕ ಮದ್ಯಪಾನ ಮಾಡಿ ಚಾಲನೆ (Drunk And Drive) ಮಾಡಿರುವುದು ಸಾಬೀತಾಗಿತ್ತು. ಇದನ್ನೂ ಓದಿ: ಬಹಿರಂಗ ಹೇಳಿಕೆ ನೀಡುವ ಶಾಸಕರೇ ಹುಷಾರ್! ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ಕಾಲ್?
ಬಳಿಕ ವಾಹನದ ದಾಖಲಾತಿಗಳನ್ನು ಪರಿಶೀಲಿಸಿದ ವೇಳೆ ಇನ್ಶೂರೆನ್ಸ್ ಇಲ್ಲ ಎಂಬುದು ಖಾತರಿಯಾಗಿತ್ತು. ಇದೆಲ್ಲ ಸೇರಿ ಚಾಲಕನಿಗೆ ಶಿವಮೊಗ್ಗ ನ್ಯಾಯಾಲಯ, 13,000 ರೂ. ದಂಡ ವಿಧಿಸಿದೆ. ಇದನ್ನೂ ಓದಿ: ನಿಮ್ಮ ಹೊಟ್ಟೆನೋವಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಕಕ್ಕೋದು ಒಳ್ಳೆಯದು – ರವಿ ಗಣಿಗ