ಅಮಿತ್ ಶಾ ಉಪಸ್ಥಿತಿಯಲ್ಲೇ 2,400 ಕೋಟಿ ಮೌಲ್ಯದ ಡ್ರಗ್ಸ್ ನಾಶ

Public TV
2 Min Read

ನವದೆಹಲಿ: ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಉಪಸ್ಥಿತಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬರೋಬ್ಬರಿ 2,381 ಕೋಟಿ ರೂ. ಮೌಲ್ಯದ 1.40 ಲಕ್ಷ ಕೆಜಿ ಗೂ ಅಧಿಕ ಮಾದಕ ದ್ರವ್ಯವನ್ನು (Drugs) ನಾಶಪಡಿಸಲಾಗಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಹಾಗೂ ಎಲ್ಲಾ ರಾಜ್ಯಗಳ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಗಳ (ANTF) ಸಮನ್ವಯದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಡ್ರಗ್ಸ್ ಅನ್ನು ನಾಶಪಡಿಸಲಾಗಿದೆ. ನವದೆಹಲಿಯಲ್ಲಿ ಮಾದಕ ವಸ್ತು ಕಳ್ಳಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತು ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅಮಿತ್ ಶಾ ಅವರು ವರ್ಚುವಲ್ ಆಗಿ ಡ್ರಗ್ಸ್ ನಾಶವನ್ನು ಮೇಲ್ವಿಚಾರಣೆ ಮಾಡಿದ್ದಾರೆ.

ಎನ್‌ಸಿಬಿ ಹೈದರಾಬಾದ್ ಘಟಕದಿಂದ ವಶಪಡಿಸಿಕೊಂಡ 6,590 ಕೆಜಿ, ಇಂದೋರ್ ಘಟಕದಿಂದ 622 ಕೆಜಿ, ಜಮ್ಮು ಮತ್ತು ಕಾಶ್ಮೀರ ಘಟಕದಿಂದ 356 ಕೆಜಿ ಡ್ರಗ್ಸ್ ಅನ್ನು ನಾಶಪಡಿಸಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ. ಇದರೊಂದಿಗೆ ಅಸ್ಸಾಂನಲ್ಲಿ 1,486 ಕೆಜಿ, ಚಂಡೀಗಢದಲ್ಲಿ 229 ಕೆಜಿ, ಗೋವಾದಲ್ಲಿ 25 ಕೆಜಿ, ಗುಜರಾತ್‌ನಲ್ಲಿ 4,277 ಕೆಜಿ, ಹರಿಯಾಣದಲ್ಲಿ 2,458 ಕೆಜಿ, ಜಮ್ಮು ಮತ್ತು ಕಾಶ್ಮೀರದಲ್ಲಿ 4,069 ಕೆಜಿ, ಮಧ್ಯಪ್ರದೇಶದಲ್ಲಿ 1,03,884 ಕೆಜಿ, ಮಹಾರಾಷ್ಟ್ರದಲ್ಲಿ 159 ಕೆಜಿ, ತ್ರಿಪುರಾದಲ್ಲಿ 1,803 ಕೆಜಿ, ಉತ್ತರ ಪ್ರದೇಶದಲ್ಲಿ 4,049 ಕೆಜಿ ಮಾದಕ ದ್ರವ್ಯವನ್ನು ನಾಶಪಡಿಸಲಾಗಿದೆ. ಇದನ್ನೂ ಓದಿ: Mobile Ban – ಇನ್ನು ಮುಂದೆ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಸುವಂತಿಲ್ಲ

ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದೆ. 2022ರ ಜೂನ್ 1 ರಿಂದ 2023 ಜುಲೈ 15 ರವರೆಗೆ ಎನ್‌ಸಿಬಿಯ ಎಲ್ಲಾ ಪ್ರಾದೇಶಿಕ ಘಟಕಗಳು ಮತ್ತು ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗಳು ಅಂದಾಜು 9,580 ಕೋಟಿ ರೂ. ಮೌಲ್ಯದ ಅಂದಾಜು 8,76,554 ಕೆಜಿ ವಶಪಡಿಸಿಕೊಂಡ ಡ್ರಗ್ಸ್ ಅನ್ನು ನಾಶಪಡಿಸಿದೆ. ಇದು ನಿರ್ಧರಿತ ಗುರಿಗಿಂತ 11 ಪಟ್ಟು ಹೆಚ್ಚಾಗಿದೆ. ಇದನ್ನೂ ಓದಿ: ಗುರು ರಾಘವೇಂದ್ರ ಬ್ಯಾಂಕ್ ಅಕ್ರಮ ಸಿಬಿಐ ತನಿಖೆಗೆ – ಕೆ.ಎನ್ ರಾಜಣ್ಣ ಘೋಷಣೆ

ಇಂದಿನ ಕಾರ್ಯಾಚರಣೆಯ ಮೂಲಕ ಒಂದೇ ವರ್ಷದಲ್ಲಿ ನಾಶವಾದ ಒಟ್ಟು ಡ್ರಗ್ಸ್‌ನ ಪ್ರಮಾಣವನ್ನು 10 ಲಕ್ಷ ಕೆಜಿ ಎಂದು ಅಂದಾಜಿಸಲಾಗಿದೆ. ಈ ಡ್ರಗ್ಸ್‌ನ ಮೌಲ್ಯ ಅಂದಾಜು 12,000 ಕೋಟಿ ರೂ. ಆಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್